ಕುಮಾರಸ್ವಾಮಿ ಬಜೆಟ್‌ಗೆ ಇವರು ಹೀಗೆ ಪ್ರತಿಕ್ರಿಯಿಸಿದರು...

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಕುರಿತಂತೆ ಆಡಳಿತ ಪಕ್ಷಗಳು ಪರಿಪೂರ್ಣ ಬಜೆಟ್ ಎಂದು ಬಣ್ಣಿಸಿದರೆ, ವಿರೋಧ ಪಕ್ಷ ಇದು ಶೂನ್ಯ ಬಜೆಟ್ ಎಂದು ಹೇಳಿದೆ.
ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಒಟ್ಟಾರೆ ಈ ಬಜೆಟ್ ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ. ಈ ಬಜೆಟ್ ಎರಡು ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ನಮ್ಮ ಹಿಂದಿನ ಯೋಜನೆಗಳನ್ನು ಮುಂದುವರೆಸಲಾಗಿದೆ. ಇದು ಸ್ವಾಗತಾರ್ಹ ಬಜೆಟ್ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Overall the budget, presented by @CMofKarnataka Shri. @hd_kumaraswamy, is good. It is based on the common minimum programme of both our parties. Many of our previous schemes are continued & I welcome the budget.#KarnatakaBudget2019
— Siddaramaiah (@siddaramaiah) February 8, 2019
ಕಳೆದ ಆರೇಳು ತಿಂಗಳುಗಳಿಂದ ಕ್ರಾಂತಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು ಆದರೆ ಈ ಬಜೆಟ್‌ನಲ್ಲಿ ಏನು ಇಲ್ಲ, ಕೇವಲ ಹಾಸನಕ್ಕೆ ಸೀಮಿತವಾಗಿದ್ದು ಈ ಬಜೆಟ್ ಮೇಲೆ ರೇವಣ್ಣ ಅವರ ಪ್ರಭಾವ ಹೆಚ್ಚಾಗಿದೆ. ಇದು ಡೋಂಗಿ ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.