ಮಂಗಳವಾರ, ಮಾರ್ಚ್ 28, 2023
33 °C
ಕಾಲು ಮುರಿದುಕೊಂಡು ನರಳುತ್ತಿರುವ ಮೂಕ‍ಪ್ರಾಣಿ

ನಟ ದರ್ಶನ್‌ಗೆ ಕಾಯುತ್ತಿದೆ 'ಬಸವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಲಿಗ್ರಾಮ (ಮೈಸೂರು): ಕೆ.ಆರ್.ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವ (ಗೂಳಿ) ಕಾಲಿಗೆ ಆಗಿರುವ ಗಾಯದಿಂದ ನರಳುತ್ತ ಗ್ರಾಮದ ಕಾಳಮ್ಮನ ದೇಗುಲದ ಮುಂಭಾಗ ನರಳುತ್ತಿರುವುದು ಸ್ಥಳೀಯರ ಕರುಳು ಹಿಂಡುತ್ತಿದೆ.

ಬಸವ ಹಲವು ವರ್ಷಗಳಿಂದ ಇಲ್ಲಿ ಬೀಡು ಬಿಟ್ಟಿದೆ. ಗ್ರಾಮಸ್ದರ ಪಾಲಿಗೆ ದೇವರಂತಿದೆ. ಮೂರು ದಿನಗಳ ಹಿಂದೆ ಆಕಸ್ಮಿಕವಾಗಿ ಬಿದ್ದು ತನ್ನ ಕಾಲು ಮುರಿದುಕೊಂಡಿದೆ.

ದರ್ಶನ್‌ಗೂ ಬಸವನಿಗೂ ನಂಟು!: ಈ ಬಸವನಿಗೂ ನಟ ದರ್ಶನ್‌ ತೂಗುದೀಪ ಅವರಿಗೂ ನಂಟಿರುವುದು ವಿಶೇಷ. ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಸುಮಲತಾ ಪರ ದರ್ಶನ್‌ ಪ್ರಚಾರ ಕೈಗೊಂಡಿದ್ದರು.

ಆಗ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಬಸವ ರಸ್ತೆ ಮಧ್ಯೆ ನಿಂತು ಗುಟುರು ಹಾಕಿತ್ತು. ಬಸವನಿಗೆ ಹೆದರಿದ್ದ ಜನರು ಓಡಿದ್ದರು. ಇದನ್ನು ಕಂಡ ದರ್ಶನ್‌, ಬಸವನ ಬಳಿ ತೆರಳಿ ಮೈ ಸವರಿ ಸಮಾಧಾನಪಡಿಸಿದ್ದು, ಶಾಂತವಾಗಿತ್ತು.

ಸದ್ಯ, ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರೂ, ಸ್ಪಂದಿಸುತ್ತಿಲ್ಲ. ದರ್ಶನ್‌ ಬಂದರೆ ಬಸವ ಸ್ಪಂದಿಸುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆ. ಅವರು ಗ್ರಾಮಕ್ಕೆ ಬರಬೇಕು. ಅದರ ಜೀವದ ಹೊಣೆ ಅವರ ಮೇಲಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಬಸವನ ಆರೋಗ್ಯದಲ್ಲಿ ಚೇತರಿಕೆ ಕಾಣಲು ದರ್ಶನ್‌ ಬರಬೇಕು. ಆಗಲೇ, ಗ್ರಾಮಸ್ಥರಿಗೂ ನೆಮ್ಮದಿ‘ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು