ಸಚಿವ ಸಂಪುಟ ಸಭೆ: ಮಲೇಷ್ಯಾ ಮರಳು ಲಾರಿಯಲ್ಲಿ ಮಾರಾಟ

ಮಂಗಳವಾರ, ಜೂಲೈ 16, 2019
23 °C

ಸಚಿವ ಸಂಪುಟ ಸಭೆ: ಮಲೇಷ್ಯಾ ಮರಳು ಲಾರಿಯಲ್ಲಿ ಮಾರಾಟ

Published:
Updated:

ಬೆಂಗಳೂರು: ಮಂಗಳೂರು ಬಂದರಿನಲ್ಲಿರುವ ಮಲೇಷ್ಯಾ ಮರಳನ್ನು ಚೀಲಗಳಲ್ಲಿ ತುಂಬಿ ಮಾರಾಟ ಮಾಡುವ ಬದಲು ಲಾರಿಗಳಲ್ಲಿ ತುಂಬಿ ಸಗಟು ಮಾರಾಟ ಮಾಡಲು ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.

ಚೆನ್ನೈನ ಆಕಾರ್‌ ಎಂಟರ್‌ಪ್ರೈಸಸ್‌ ಎಂಬ ಕಂಪನಿ ಕೇಂದ್ರ ಸರ್ಕಾರದ ಮುಕ್ತ ಸಾಮಾನ್ಯ ಪರವಾನಗಿ (ಒಜಿಎಲ್‌) ಬಳಸಿಕೊಂಡು ಮಲೇಷ್ಯಾದಿಂದ ಮರಳನ್ನು ಆಮದು ಮಾಡಿಕೊಂಡಿದೆ. 1 ಲಕ್ಷ ಟನ್‌ನಷ್ಟು ಮರಳು ನವ ಮಂಗಳೂರು ಬಂದರಿನಲ್ಲಿದೆ. ಇಲ್ಲಿಯವರೆಗೆ 400 ಟನ್‌ ಮರಳು ಮಾರಾಟವಾಗಿದೆ. ಬೆಲೆ ಹೆಚ್ಚು ಎಂಬ ಕಾರಣಕ್ಕೆ ಜನರು ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ, ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಸಗಟು ಖರೀದಿ ಮಾಡಿದರೆ ₹4 ಸಾವಿರದಷ್ಟು ಬೆಲೆ ಕಡಿಮೆ ಆಗುತ್ತದೆ.

ಬ್ಯಾಗ್ ಬದಲಿಗೆ ಜಿಪಿಎಸ್ ಅಳವಡಿಸಿ ಟ್ರಕ್ ಗಳಲ್ಲಿ ಮಾರಾಟ ಮಾಡಲು ಸಂಪುಟ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಗೆ ಮಲೇಷ್ಯಾ ಮರಳು ಸಾಗಿಸಲು ನವಮಂಗಳೂರು ಬಂದರು ಉಪಯೋಗಿಸಲು ಸಂಪುಟ ಅನುಮತಿ ನೀಡಿದೆ. ಈಗಿರುವ ಮರಳು ದಾಸ್ತಾನನ್ನು ರಾಜ್ಯಕ್ಕೆ ಮಾತ್ರ ಬಳಸಬೇಕು. ಮುಂದೆ ಆಮದಾಗುವ ಮರಳನ್ನು ಸಾಗಿಸಲು ಅನುಮತಿ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಇದನ್ನೂ ಓದಿ.....

ಸುದೀರ್ಘ ಬರಹ: ಬಗೆದಷ್ಟೂ ಇದೆ ಮರಳಿನ ಕಥೆ, ಭೂತಾಯಿಯ ವ್ಯಥೆ

ಕರಾವಳಿ ನದಿಗಳ ಅಧ್ಯಯನ: ‘ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಸಲ ದಾಖಲೆಯ ಮಳೆಯಾಗಿದೆ. ಆದರೆ, ಅನೇಕ ನದಿಗಳಲ್ಲಿ ಈಗಾಹಲೇ ನೀರಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಏಕಾಏಕಿ ಈ ಬದಲಾವಣೆಗೆ ಕಾರಣವೇನು ಎಂಬ ಬಗ್ಗೆ ಹಾಗೂ ಇಲ್ಲಿನ ನದಿಗಳ ಭವಿಷ್ಯದ ಬಗ್ಗೆ ಅಧ್ಯಯನ ‌ನಡೆಸಲು ತಜ್ಞರ ಸಮಿತಿ ನೇಮಿಸಲು ಸಮ್ಮತಿ‌ ಸೂಚಿಸಲಾಗಿದೆ.

ಸಂಪುಟದ ತೀರ್ಮಾನಗಳು:

*ರಾಜ್ಯದಲ್ಲಿ ಸಿರಿಧಾನ್ಯ‌ ಬೆಳೆ ವಿಸ್ತೀರ್ಣವನ್ನು 60 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸುವ ಅಂದಾಜು ₹24 ಕೋಟಿ ಯೋಜನೆಗೆ ಒಪ್ಪಿಗೆ.

* ಹಾಲು ಒಕ್ಕೂಟದ 14 ಸಾವಿರ ಸಿಬ್ಬಂದಿಗೆ ಗುಣಮಟ್ಟದ ಹಾಲು ಸಂಗ್ರಹಕ್ಕಾಗಿ ಪ್ರತಿ ಲೀಟರ್ ಗೆ 20 ಪೈಸೆ ಪ್ರೋತ್ಸಾಹ ಧನ ನೀಡಲು ಒಪ್ಪಿಗೆ. ಈ ಯೋಜನೆಗೆ ₹27.5 ಕೋಟಿ ಅನುದಾನ ಮಂಜೂರು.

*ಹಾಸನ ಜಿಲ್ಲೆಯಲ್ಲಿ ₹474 ಕೋಟಿ ಅಂದಾಜಿನಲ್ಲಿ ನಿರ್ಮಾಣವಾಗುವ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿಗೆ ₹50 ಕೋಟಿ ಅನುದಾನ.

*ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪ್ರವೇಶ ಪಡೆಯಲು ಜಾತಿ ದೃಢೀಕರಣ ಪತ್ರ ನೀಡಲು ಒಪ್ಪಿಗೆ.

*ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಸಲುವಾಗಿ ಸಂವಿಧಾನದ 371 ಜೆ ಕಲಂ ಅಡಿ ಜಾರಿ ಕುರಿತು ಹೊರಡಿಸಲಾಗಿರುವ ಆದೇಶಗಳ ಪ್ರಗತಿ ಪರಿಶೀಲನೆಗೆ ರಚಿಸಿರುವ ಸಂಪುಟ ಉಪಸಮಿತಿಗೆ ಘಟನೋತ್ತರ ಅನುಮೋದನೆ.

*ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ₹16.15 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಮಹಿಳಾ ಪಾಲಿಟೆಕ್ನಿಕ್ ಗೆ ಆಡಳಿತಾತ್ಮಕ ಅನುಮೋದನೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !