ಗುರುವಾರ , ಏಪ್ರಿಲ್ 15, 2021
26 °C
ಸಿಎಸ್‌ಐಆರ್‌ ಮಹಾನಿರ್ದೇಶಕ ಶೇಖರ್ ಸಿ.ಮಂಡೆ ಮಾಹಿತಿ

‘ಸ್ಪೆಂಟ್‌ವಾಷ್‌’ನಿಂದ ಪೊಟ್ಯಾಷಿಯಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಕ್ಕರೆ ಕಾರ್ಖಾನೆಗಳ ಮದ್ಯಸಾರ ಘಟಕಗಳಿಂದ ಹೊರಬರುವ ‘ಸ್ಪೆಂಟ್‌ ವಾಷ್‌’ ತ್ಯಾಜ್ಯವನ್ನು, ಪೊಟ್ಯಾಷಿಯಂ ಆಗಿ ಪರಿವರ್ತಿಸುವ ತಂತ್ರಜ್ಞಾನವನ್ನು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಅಭಿವೃದ್ಧಿಪಡಿಸಿದೆ ಎಂದು ಮಂಡಳಿಯ ಮಹಾನಿರ್ದೇಶಕ ಶೇಖರ್ ಸಿ.ಮಂಡೆ ತಿಳಿಸಿದರು.

‘ಅಹಮದಾಬಾದ್‌ನ ಡಿಸ್ಟಿಲರಿಯೊಂದರಲ್ಲಿ ಈ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಇದರಿಂದ ಪೊಟ್ಯಾಷಿಯಂ ತಯಾರಿಸಿ ಕೃಷಿಯಲ್ಲಿ ಬಳಸಬಹುದು. ಈ ತಂತ್ರಜ್ಞಾನವನ್ನು ಎಲ್ಲ ಡಿಸ್ಟಿಲರಿಗಳು ಅಳವಡಿಸಿಕೊಂಡರೆ ವಿದೇಶದಿಂದ ಪೊಟ್ಯಾಷಿಯಂ ಆಮದು ಮಾಡಿಕೊಳ್ಳುವ ಅವಶ್ಯವಿಲ್ಲ. ಒಂದು ವರ್ಷಕ್ಕೆ ₹500ರಿಂದ 700 ಕೋಟಿ ಉಳಿತಾಯ ಆಗುತ್ತದೆ’ ಎಂದರು.

‘ನಿಖರ ಕೃಷಿ’ ತಂತ್ರಜ್ಞಾನದ ಪ್ರಾಯೋಗಿಕ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ. ಇದರಲ್ಲಿ ರೈತರು ತಮ್ಮ ಮಣ್ಣು, ಬೆಳೆ ಮತ್ತು ಅದರ ಬೆಳವಣಿಗೆಯ ಗುಣಲಕ್ಷಣಗಳನ್ನು ಮೊಬೈಲ್ ತಂತ್ರಾಂಶಕ್ಕೆ ಹಾಕಿ ಏನು ಮಾಡಬೇಕು ಎನ್ನುವುದರ ಕರಾರುವಾಕ್ಕು ಮಾಹಿತಿ ಪಡೆಯಬಹುದು. ಇದಕ್ಕಾಗಿ ಅಗ್ಗದ ದರದ ಸೆನ್ಸರ್‌ಗಳೂ ಇದ್ದು, ಅದನ್ನು ಅಲ್ಲಲ್ಲಿ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು