26ನೇ ವಯಸ್ಸಿಗೇ ನ್ಯಾಯಾಧೀಶೆ!

7
ಇಂಡಿ ತಾಲ್ಲೂಕಿನ ನಂದರಗಿ ಗ್ರಾಮದ ನಿವಾಸಿ

26ನೇ ವಯಸ್ಸಿಗೇ ನ್ಯಾಯಾಧೀಶೆ!

Published:
Updated:
Deccan Herald

ಬಾಗಲಕೋಟೆ: ನಗರದ ಚೈತ್ರಾ ಕುಲಕರ್ಣಿ ಅವರು 26ನೇ ವಯಸ್ಸಿಗೇ ಕಿರಿಯ ನ್ಯಾಯಾಧೀಶರಾಗಿ ಆಯ್ಕೆಯಾದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಇಲ್ಲಿನ ಎಸ್‌ಆರ್‌ಎನ್‌ ಕಲಾ ಮತ್ತು ಎಂಬಿಎಸ್ ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ವಸಂತ ಕುಲಕರ್ಣಿ ಅವರ ಮಗಳಾದ ಚೈತ್ರಾ ಅವರದ್ದು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ನಂದರಗಿ ಗ್ರಾಮ.

ಬಾಗಲಕೋಟೆಯಲ್ಲಿ ಎಲ್‌ಎಲ್‌ಬಿ ಮುಗಿಸಿ ಹಿರಿಯ ವಕೀಲ ಆರ್.ಎಸ್.ಬರಗುಂಡಿ ಅವರ ಬಳಿ ಮೂರು ವರ್ಷ ವೃತ್ತಿ ತರಬೇತಿ ಪಡೆದಿದ್ದರು. ಹೈಕೋರ್ಟ್‌ನಲ್ಲಿ ಆರು ತಿಂಗಳ ತರಬೇತಿ ನಂತರ ಕಿರಿಯ ನ್ಯಾಯಾಧೀಶೆ (ಸಿವಿಲ್‌) ಹುದ್ದೆ ಅಲಂಕರಿಸಲಿದ್ದಾರೆ.

ನ್ಯಾಯಾಂಗ ಇಲಾಖೆ ಇತ್ತೀಚೆಗೆ 101 ನ್ಯಾಯಾಧೀಶರ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. ನಾಲ್ಕು ಸಾವಿರ ಮಂದಿ ಪೂರ್ವಭಾವಿ ಪರೀಕ್ಷೆಗೆ ಕುಳಿತಿದ್ದರು. ಅವರಲ್ಲಿ 946 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಸಂದರ್ಶನಕ್ಕೆ ಹಾಜರಾಗಿದ್ದ 86 ಮಂದಿ ಪೈಕಿ ಚೈತ್ರಾ ಸೇರಿದಂತೆ 33 ಮಂದಿ ಆಯ್ಕೆಯಾಗಿದ್ದಾರೆ.‌

ಚೈತ್ರಾ ಪಿಯುಸಿವರೆಗೂ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 37

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !