ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆಯ ಮೈಲ್ಯಾಬ್ಸ್‌ನಿಂದ ಅಗ್ಗದ ಕಿಟ್‌

ಪುಣೆಯ ಮೈಲ್ಯಾಬ್ಸ್‌ನಿಂದ ಅಭಿವೃದ್ಧಿ * ತಪಾಸಣಾ ಅವಧಿಯಲ್ಲಿ ಭಾರಿ ಇಳಿಕೆ
Last Updated 24 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕೊರೊನಾ ವೈರಸ್ ಸೋಂಕು ತಪಾಸಣೆ ಮತ್ತು ಕೋವಿಡ್–19 ದೃಢಪಡಿಸುವ ತಪಾಸಣ ಕಿಟ್ ಅನ್ನು
ಪುಣೆಯ ‘ಮೈಲ್ಯಾಬ್‌ ಡಿಸ್ಕವರಿ ಸೊಲ್ಯೂಷನ್ಸ್‌’ ಅಭಿವೃದ್ಧಿಪಡಿಸಿದೆ.

ಈ ಕಿಟ್‌ ಅನ್ನು ತಯಾರಿಸಲು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ಎನ್‌ಐವಿ)ಮತ್ತು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ(ಸಿಡಿಎಸ್‌ಸಿಒ)ಅನುಮತಿ ನೀಡಿವೆ.

ಭಾರತದಲ್ಲಿ ಈಗ ಬಳಕೆಯಲ್ಲಿರುವ ಕಿಟ್‌ನ ಮೂಲಕ ಕೊರೊನಾವೈರಸ್‌ ಸೋಂಕು ತಗಲಿರುವುದು ಮತ್ತು ಕೋವಿಡ್‌–19ಪೀಡಿತರಾಗಿರುವುದನ್ನು ಪತ್ತೆ ಮಾಡಲು7ರಿಂದ8ಗಂಟೆ ಬೇಕಾಗುತ್ತದೆ.

ಮೈಲ್ಯಾಬ್‌ ಅಭಿವೃದ್ಧಿಪಡಿಸಿರುವ ‘ಮೈಲ್ಯಾಬ್ ಪ್ಯಾಥೋಡಿಟೆಕ್ಟ್‌ ಕೋವಿಡ್‌–19 ಕ್ವಾಲಿಟೇಟಿವ್‌ ಪಿಸಿಆರ್‌ಕಿಟ್‌’ನ ಮೂಲಕ ಕೇವಲ ಎರಡೂವರೆ ಗಂಟೆಗಳಲ್ಲಿ ತಪಾಸಣೆಯ ಫಲಿತಾಂಶ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT