ಬುಧವಾರ, ಜುಲೈ 15, 2020
22 °C
ಕಾಫಿನಾಡು ಈಗ ಕೋವಿಡ್‌ ಮುಕ್ತ

ಚಿಕ್ಕಮಗಳೂರು: 16 ಮಂದಿ ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕೋವಿಡ್‌ನಿಂದ ಮತ್ತೆ ಇಬ್ಬರು ಗುಣುಮುಖರಾಗಿದ್ದು, ಶನಿವಾರ ಕೋವಿಡ್‌  ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿದ್ದ 16 ಮಂದಿಯೂ ಗುಣಮುಖರಾಗಿದ್ದಾರೆ.

ಪಿ–2765 (28 ವರ್ಷ) ಮತ್ತು ಪಿ–2766 (38ವರ್ಷ) ಅವರನ್ನು ಬಿಡುಗಡೆಗೊಳಿಸಲಾಗಿದೆ. ಇಬ್ಬರೂ ಪುರುಷರು. ಒಬ್ಬರು ಮಹಾರಾಷ್ಟ್ರದಿಂದ ಎನ್‌.ಆರ್‌.ಪುರ ತಾಲ್ಲೂಕಿಗೆ ಬಂದವರು, ಮತ್ತೊಬ್ಬರು ನವದೆಹಲಿಯಿಂದ ಶೃಂಗೇರಿ ತಾಲ್ಲೂಕಿನ ಬಂದವರು.
ಸೋಂಕು ಪತ್ತೆಯಾಗಿದ್ದವರೆಲ್ಲರೂ ಹೊರರಾಜ್ಯಗಳಿಂದ ಬಂದವರು. ಜಿಲ್ಲೆಯ ಯಾರಿಗೂ ಈವರೆಗೆ ದೃಢಪಟ್ಟಿಲ್ಲ. ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು