ಸರ್ಕಾರಿ ಶಾಲೆಗೆ ಮಕ್ಕಳ ಲಗ್ಗೆ!

7
ಹೈಟೆಕ್‌ ಸ್ಪರ್ಶ ನೀಡಿರುವ ಶಿಕ್ಷಕ ಮತ್ತು ಎಸ್‌ಡಿಎಂ ಅಧ್ಯಕ್ಷ

ಸರ್ಕಾರಿ ಶಾಲೆಗೆ ಮಕ್ಕಳ ಲಗ್ಗೆ!

Published:
Updated:

ಬೀದರ್: ಉರ್ದು, ತೆಲುಗು ಹಾಗೂ ಮರಾಠಿ ಪ್ರಭಾವದಿಂದಾಗಿ ಜಿಲ್ಲೆಯಲ್ಲಿ ಕನ್ನಡ ನಲುಗಿದೆ. ಸೌಕರ್ಯಗಳ ಕೊರತೆಯಿಂದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳೂ ಸೊರಗಿವೆ. ಇಂಥ ಪರಿಸ್ಥಿತಿಯ ನಡುವೆಯೂ ಜಿಲ್ಲೆಯ ಶಾಲೆಯೊಂದರ ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡುವ ಮೂಲಕ ಖಾಸಗಿ ಶಾಲೆಯ ವಿದ್ಯಾರ್ಥಿಗಳೂ ಸರ್ಕಾರಿ ಶಾಲೆಗೆ ಬರುವಂತೆ ಮಾಡಿದ್ದಾರೆ.

ಕರ್ನಾಟಕ–ತೆಲಂಗಾಣ ಗಡಿಯಿಂದ 6 ಕಿ.ಮೀ ಅಂತರದಲ್ಲಿರುವ ಬೀದರ್‌ ತಾಲ್ಲೂಕಿನ ಫತೇಪುರ, ಗೋಲಗೊಮ್ಮಟ ಮಾದರಿಯಲ್ಲಿರುವ ಸಂತ ಅಮಿರ್‌ ಫಕ್ರುಲ್‌ ಮುಲ್ಕ್‌ ಗಿಲಾನಿ ಸಮಾಧಿಯಿಂದಾಗಿಯೇ ಪ್ರಸಿದ್ಧಿ ಪಡೆದ ಗ್ರಾಮ. ಆದರೆ, ಈಗ ಮಾದರಿ ಶಾಲೆಯಿಂದಾಗಿ ಗಡಿ ಗ್ರಾಮಗಳಲ್ಲಿ ಮನೆ ಮಾತಾಗಿದೆ. 2006ರಲ್ಲಿ ಗ್ರಾಮದ ಹೊರವಲಯದಲ್ಲಿ ಈ ಶಾಲೆ ನಿರ್ಮಾಣ ಮಾಡಲಾಯಿತು.

ರಿಲಯನ್ಸ್‌ ಫೌಂಡೇಷನ್‌ ರಾತ್ರಿ ಪಾಠಶಾಲೆಗಾಗಿ ಗ್ರಾಮಕ್ಕೆ ಪ್ರಾಜೆಕ್ಟರ್‌ ನೀಡಿತ್ತು. ಗ್ರಾಮಸ್ಥರು ಬಳಸಿಕೊಳ್ಳದ ಕಾರಣ ಎಸ್‌ಡಿಎಂಸಿ ಅಧ್ಯಕ್ಷ ಪ್ರಭು ಸಂತಪುರೆ ಗ್ರಾಮಸ್ಥರ ಮನವೊಲಿಸಿ ಅದನ್ನು ಶಾಲೆಯಲ್ಲಿ ತಂದು ಅಳವಡಿಸಿದರು. ಶಿಕ್ಷಕರು, ವಿದ್ಯಾರ್ಥಿಗಳ ನೆರವಿನೊಂದಿಗೆ ಶಾಲೆಯ ಆವರಣದಲ್ಲಿ ಚಿಕ್ಕದಾದ ಉದ್ಯಾನ ನಿರ್ಮಿಸಿದರು. ಕೊಳವೆಬಾವಿ ಇರುವ ಕಾರಣ ನೀರಿನ ಸಮಸ್ಯೆಯಾಗಲಿಲ್ಲ. ಆಲಂಕಾರಿಕ ಸಸಿಗಳಿಂದಾಗಿ ಶಾಲೆಗೆ ಇನ್ನಷ್ಟು ಕಳೆ ಬಂದಿತು. ಶಿಕ್ಷಕರ ಆಸಕ್ತಿಯನ್ನು ಮನಗಂಡ ಪಿಡಿಒ ಕಂಟೆಪ್ಪ ಅವರು ಶಾಲಾ ಆವರಣಗೋಡೆ ನಿರ್ಮಿಸಿಕೊಟ್ಟರು.

ಶಿಕ್ಷಕರು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಶಾಲಾ ಆವರಣದಲ್ಲಿ ತರಕಾರಿ ಬೆಳೆಸಿದರು. ಇಲ್ಲಿ ಬೆಳೆದ ತರಕಾರಿಯನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲು ಆರಂಭಿಸಿದರು. ಮೈದಾನದ ಅಂಚಿನಲ್ಲಿ ಅನೇಕ ಬಗೆಯ ಮರಗಳನ್ನು ಬೆಳೆಸಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಶಾಲೆಗೆ ಭೇಟಿ ಕೊಟ್ಟು ಪರಿಸರ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸತತ ಎರಡು ವರ್ಷ ತಲಾ ₹ 5 ಸಾವಿರ ನಗದು ಬಹುಮಾನ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷರು ಈ ಹಣದಲ್ಲಿ ಪ್ರತಿಯೊಂದು ಕೊಠಡಿಗೆ 
ವಿದ್ಯುತ್‌ ಸಂಪರ್ಕ, ಫ್ಯಾನ್‌ ಸೌಲಭ್ಯ ಒದಗಿಸಿದರು.

ಆಯ್ಕೆ: ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ಆದರ್ಶ ವಿದ್ಯಾಲಯಕ್ಕೆ ಫತೇಪುರ ಸರ್ಕಾರಿ ಪ್ರಾಥಮಿಕ ಶಾಲೆಯ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

12 ವಿದ್ಯಾರ್ಥಿಗಳು ಆಯ್ಕೆ

ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ಆದರ್ಶ ವಿದ್ಯಾಲಯಕ್ಕೆ ಫತೇಪುರ ಸರ್ಕಾರಿ ಪ್ರಾಥಮಿಕ ಶಾಲೆಯ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ 49 ಬಾಲಕಿಯರು ಹಾಗೂ 46 ಬಾಲಕರು ಸೇರಿ ಒಟ್ಟು 95 ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳ ಫಲಿತಾಂಶದ ಪ್ರಮಾಣ ಶೇಕಡ 90ರಷ್ಟು ಇದೆ.

**

ಎಸ್‌ಡಿಎಂಸಿ ಸಹಕಾರದೊಂದಿಗೆ ಎರಡು ವರ್ಷಗಳಲ್ಲಿ ಶಾಲೆಯ ಚಿತ್ರಣ ಬದಲಾಯಿಸಿದ್ದು, ಉರ್ದು ಶಾಲೆಯ ಮಕ್ಕಳೂ ಕನ್ನಡ ಶಾಲೆಗೆ ಬರಲು ಆಸಕ್ತಿ ತೋರುತ್ತಿದ್ದಾರೆ.
– ಝರೆಪ್ಪ ಕಾಂಬಳೆ, ಮುಖ್ಯ ಶಿಕ್ಷಕ

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !