ಭಾನುವಾರ, ಸೆಪ್ಟೆಂಬರ್ 26, 2021
21 °C

‘ಅತ್ಯಂತ ಸ್ವಚ್ಛ ನಗರ’: ಮೈಸೂರಿಗೆ ಮೂರನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ವರ್ಷದ ‘ಅತ್ಯಂತ ಸ್ವಚ್ಛ ನಗರ’ ವಿಭಾಗದಲ್ಲಿ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿಗೆ ಮೂರನೇ ಸ್ಥಾನ ಲಭಿಸಿದೆ.

ಮಧ್ಯಪ್ರದೇಶದ ಇಂದೋರ್‌ಗೆ ಮೊದಲ ಹಾಗೂ ಛತ್ತೀಸ್‌ಗಡದ ಅಂಬಿಕಾಪುರಕ್ಕೆ ಎರಡನೇ ಸ್ಥಾನ ಲಭಿಸಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ‘ಸ್ವಚ್ಛ ಸರ್ವೇಕ್ಷಣ–2019’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

14ನೇ ಸ್ಥಾನದಲ್ಲಿ ಕರ್ನಾಟಕ

* ಸಮೀಕ್ಷೆ ನಡೆದ 28 ರಾಜ್ಯಗಳ ಪೈಕಿ ಕರ್ನಾಟಕ 14ನೇ ಸ್ಥಾನದಲ್ಲಿದೆ

* ಮಂಗಳೂರು 165ನೇ ಸ್ಥಾನ ‍ಪಡೆದಿದೆ

* ಬೆಂಗಳೂರು– 194, ತುಮಕೂರು–231 ಹಾಗೂ ಹುಬ್ಬಳ್ಳಿ–ಧಾರವಾಡ 235ನೇ ಸ್ಥಾನ ಪಡೆದಿವೆ

ಇತರ ಪ್ರಶಸ್ತಿಗಳಿಗೆ ಆಯ್ಕೆಗೊಂಡ ನಗರ/ಪಟ್ಟಣಗಳು

ಅತ್ಯಂತ ಸ್ವಚ್ಛ ಸಣ್ಣ ನಗರ: ನವದೆಹಲಿ ಮುನ್ಸಿಪಲ್‌ ಕೌನ್ಸಿಲ್ ಪ್ರದೇಶ

ಅತ್ಯಂತ ಸ್ವಚ್ಛ ಮಧ್ಯಮ ನಗರ: ಉಜ್ಜೈನ್

ಅತ್ಯಂತ ಸ್ವಚ್ಛ ಬೃಹತ್‌ ನಗರ: ಅಹಮದಾಬಾದ್‌

ತೀವ್ರವಾಗಿ ಬೆಳೆಯುತ್ತಿರುವ ಬೃಹತ್‌ ನಗರ: ರಾಯಪುರ

ತೀವ್ರವಾಗಿ ಬೆಳೆಯುತ್ತಿರುವ ಮಧ್ಯಮ ನಗರ: ಮಥುರಾ ವೃಂದಾವನ

ಅತ್ಯುತ್ತಮ ಗಂಗಾ ಪಟ್ಟಣ: ಗೌಚಾರ್‌ (ಉತ್ತರಾಖಂಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು