ಮೋದಿ ಅಪ್ಪಟ ಸುಳ್ಳುಗಾರ; ಬಣ್ಣದ ಮಾತುಗಳಿಗೆ ಮರುಳಾಗದಿರಿ: ಕುಮಾರಸ್ವಾಮಿ ವಾಗ್ದಾಳಿ

ಗುರುವಾರ , ಮಾರ್ಚ್ 21, 2019
27 °C
ನಾನು–ಪರಮೇಶ್ವರ ಹಕ್ಕ- ಬುಕ್ಕ ಇದ್ದಂತೆ: ಮುಖ್ಯಮಂತ್ರಿ ಹೇಳಿಕೆ

ಮೋದಿ ಅಪ್ಪಟ ಸುಳ್ಳುಗಾರ; ಬಣ್ಣದ ಮಾತುಗಳಿಗೆ ಮರುಳಾಗದಿರಿ: ಕುಮಾರಸ್ವಾಮಿ ವಾಗ್ದಾಳಿ

Published:
Updated:

ಬೆಂಗಳೂರು: ಪ್ರಧಾನಿ ಮೋದಿಯಂತ ಅಪ್ಪಟ ಸುಳ್ಳುಗಾರ ಎಲ್ಲಿಯೂ ಸಿಗಲ್ಲ. ಅವರ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.

1 ಲಕ್ಷ ಮನೆಗಳ ನಿರ್ಮಾಣದ ವಸತಿ ಯೋಜನೆಯ ಭೂಮಿಪೂಜೆ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮೊನ್ನೆ ಕಲಬುರ್ಗಿಗೆ ಬಂದಿದ್ದ ಮೋದಿ, ನಮ್ಮ ರಾಜ್ಯ ಸರ್ಕಾರ ಸಾಲಮನ್ನಾದ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದೆ ಎಂದು, ಇನ್ನು ಹಲವು ಲಘುವಾದ ಮಾತುಗಳನ್ನಾಡಿದ್ದಾರೆ. ನಾವು 6 ತಿಂಗಳಿನಲ್ಲಿ ₹11 ಸಾವಿರ ಕೋಟಿಗಳನ್ನು ರೈತರ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿದ್ದೇವೆ. ಇದರಿಂದ 14 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದು ಸಾರಿದರು.

ಅದು ಎಂತಹದ್ದೊ ವರ್ಷಕ್ಕೆ ₹6 ಸಾವಿರ ಕೊಡುವ ಯೋಜನೆಯನ್ನು(ಕಿಸಾನ್ ಸಮ್ಮಾನ್ ನಿಧಿ) ಕೇಂದ್ರ ತಂದಿದೆಯಂತೆ. ಅದಕ್ಕಾಗಿ ₹75 ಸಾವಿರ ಕೋಟಿ ಮೀಸಲಿಟ್ಟಿದ್ದಾರಂತೆ. ಅದರಲ್ಲಿ ಫಲಾನುಭವಿಯಾಗಲು ರಾಜ್ಯ ಸರ್ಕಾರ ರೈತರ ಮಾಹಿತಿಯನ್ನೆ ನೀಡುತ್ತಿಲ್ಲ ಎಂದು ಕೇಂದ್ರದವರು ಹೇಳಿಕೊಂಡು ತಿರುಗುತ್ತಿದ್ದಾರೆ.

ಈ ಯೋಜನೆಯ ಸೌಲಭ್ಯಕ್ಕಾಗಿ ರಾಜ್ಯದಲ್ಲಿ 8,54,000 ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿನ 2,08,000 ಅರ್ಜಿಗಳ ಮಾಹಿತಿಯನ್ನು ಯೋಜನೆಯ ತಂತ್ರಾಂಶಕ್ಕೆ ಬುಧವಾರ ಬೆಳಿಗ್ಗೆ ಹೊತ್ತಿಗೆ( ಮಾರ್ಚ್ 7) ಅಪ್ ಲೋಡ್ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಅದರಲ್ಲಿ ಕೇವಲ 17 ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿಯೂ 6 ರೈತರ ಖಾತೆಗೆ ಮಾತ್ರ ಹಣ ಜಮಾ ಮಾಡಿದೆ. ಅದರಲ್ಲಿ ಒಬ್ಬರ ಖಾತೆಗೆ ₹950 ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಇಂದು ಉತ್ತರ ಕರ್ನಾಟಕದ ರೈತರು ಬರದಿಂದ ಪರದಾಡುತ್ತಿದ್ದಾರೆ. ನರೇಗಾ ಯೋಜನೆಯಡಿ ₹2000 ಕೋಟಿ ಅನುದಾನ ರಾಜ್ಯಕ್ಕೆ ಬರಬೇಕಿದೆ. ರಾಜ್ಯವೇ ₹900 ಕೋಟಿಯಿಂದ ನರೇಗಾದ ದಿನಗೂಲಿಗಳನ್ನು ವಿತರಿಸುತ್ತಿದೆ. ಇಂತಹ ವಿಷಯಗಳನ್ನು ಬಿಟ್ಟು, ಮೋದಿ ಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ಸುಳ್ಳು ಹೇಳಿಕೊಂಡೆ ನಾಲ್ಕುವರೇ ವರ್ಷ ದೇಶ ಆಳಿದ್ದಾರೆ ಎಂದು ಹರಿಹಾಯ್ದರು. ನಮ್ಮ ಮನೆಯ ಬಾಗಿಲು ನಿಮಗೆ ಯಾವಾಗಲೂ ತೆರೆದಿರುತ್ತದೆ. ನೀವು ಅವರ ಮನೆಗೆ ಸುಲಭವಾಗಿ ಹೋಗಲು ಆಗುವುದಿಲ್ಲ. ಅದಕ್ಕಾಗಿ ನಿಮ್ಮ ಬೆಂಬಲ ನಮಗಿರಲಿ ಎಂದು ಮನವಿ ಮಾಡಿದರು.

*
ನಾನು ಮತ್ತು ಪರಮೇಶ್ವರ ಹಕ್ಕ- ಬುಕ್ಕ ಇದ್ದಂತೆ. ವಿಜಯನಗರದಂತಹ ಸಾಮ್ರಾಜ್ಯವನ್ನು ರಾಜ್ಯದಲ್ಲಿ ಕಟ್ಟಲು ನಿಮ್ಮ ಆಶಿರ್ವಾದ ಇರಲಿ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 19

  Angry

Comments:

0 comments

Write the first review for this !