ಸ್ಪೀಕರ್ ಹೆಸರು ಪ್ರಸ್ತಾಪಿಸಿರುವುದು ಯಡಿಯೂರಪ್ಪ ಧ್ವನಿ ಎಂದು ಹೇಳಿಲ್ಲ: ಸಿಎಂ

7

ಸ್ಪೀಕರ್ ಹೆಸರು ಪ್ರಸ್ತಾಪಿಸಿರುವುದು ಯಡಿಯೂರಪ್ಪ ಧ್ವನಿ ಎಂದು ಹೇಳಿಲ್ಲ: ಸಿಎಂ

Published:
Updated:

ಮಂಗಳೂರು: ನಿನ್ನೆ ಬಿಡುಗಡೆ ಮಾಡಿರುವ ಸಿಡಿಯಲ್ಲಿ ಯಾರ್ಯಾರು, ಏನೇನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಆಗಲೇ ಸತ್ಯ ಹೊರಗೆ ಬರಲಿದೆ. ಯಡಿಯೂರಪ್ಪ ಮಾತನಾಡಿದ್ದಾರೆ ಎಂದು‌ ನಾನು ಹೇಳಿದ್ದೇನೆಯೇ? ತನಿಖೆ ನಂತರ ಯಾರು ಮಾತನಾಡದ್ದಾರೆ ಎಂಬುದು ಸ್ಪಷ್ಟವಾಗಲಿದೆ ಎಂದು ‌ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ನಗರದ‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮಾತನಾಡಿದ್ದಾರೆ ಎಂದು ನಾನು ಹೇಳಿಲ್ಲ ಎಂದರು.

ಇದನ್ನೂ ಓದಿ... ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊದಲ್ಲಿ ಏನಿದೆ?

ರಮೇಶ್ ಕುಮಾರ್ ಅವರೇ ನನ್ನ ಹೆಸರನ್ನು ಯಡಿಯೂರಪ್ಪ ಪ್ರಸ್ತಾಪಿಸಿಲ್ಲ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನಾದರೂ‌ ಯಡಿಯೂರಪ್ಪ ಅವರೇ ‌ಮಾತನಾಡಿದ್ದಾರೆ‌ ಎಂದು ಹೇಳಿದ್ದೇನೆಯೇ ಎಂದು ಮರು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು‌ ಮಾಡುವಂತಹ ಇಂತಹ ಬಿಜೆಪಿ ‌ನಾಯಕರ ವಿರುದ್ದ ಸಮಗ್ರ ತನಿಖೆ‌ ಆಗಬೇಕು‌. ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕು ಎಂದರು. ಎಸಿಬಿ ತನಿಖೆಯ ಬಗ್ಗೆ ಮುಂದೆ ಯೋಚನೆ ಮಾಡಲಾಗವುದು ಎಂದರು.

ಇವನ್ನೂ ಓದಿ...

ಸಿಎಂ ಕುಮಾರಸ್ವಾಮಿ ಮಾಧ್ಯಮಗೋಷ್ಠಿ; ಬಿಜೆಪಿಯಿಂದ ಶಾಸಕರಿಗೆ ಗಾಳ, ಆಡಿಯೊ ಬಿಡುಗಡೆ

ನಕಲಿ ಆಡಿಯೊ ಕೇಳಿಸಿ ಕಥೆ ಹೇಳ್ತಿದ್ದೀರಿ: ಸಿಎಂಗೆ ಯಡಿಯೂರಪ್ಪ ತಿರುಗೇಟು

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !