ಸಂಕ್ರಾಂತಿವರೆಗೂ ಮೈಕೊರೆಯುವ ಚಳಿ

7

ಸಂಕ್ರಾಂತಿವರೆಗೂ ಮೈಕೊರೆಯುವ ಚಳಿ

Published:
Updated:

ಬೆಂಗಳೂರು: ಮೈ ಕೊರೆಯುವ ಚಳಿ ಸಂಕ್ರಾಂತಿವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಹವಾಮಾನದಲ್ಲಿ ಏರಿಳಿತವೂ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ 3–4 ದಿನಗಳಿಂದ ಚಳಿ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದೆ. ಆದರೂ ಕೆಲವು ಪ್ರದೇಶಗಳಲ್ಲಿ ಮುಂದಿನ ಕೆಲವು ದಿನ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ವಿಜಯಪುರದಲ್ಲಿ ಭಾನುವಾರ 9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.‌

ಬೆಳಗಾವಿ, ಮಂಡ್ಯದಲ್ಲಿ ತಲಾ 11, ಬೆಂಗಳೂರು, ಬೀದರ್, ಬಳ್ಳಾರಿ 13, ಕಲಬುರ್ಗಿ, 15, ಗದಗ, ಕಾರವಾರ, ರಾಯಚೂರಿನಲ್ಲಿ ತಲಾ 16 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. 

‘ಉತ್ತರ ಭಾರತದ ಕಡೆಯಿಂದ ದಕ್ಷಿಣದೆಡೆಗೆ ಶೀತಗಾಳಿ ಮತ್ತಷ್ಟು ಪ್ರಬಲವಾಗಿ ಬೀಸುತ್ತಿರುವುದರಿಂದ ತಾಪಮಾನದಲ್ಲಿ ಕುಸಿತವಾಗಲಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !