ಮಂಗಳವಾರ, ಸೆಪ್ಟೆಂಬರ್ 22, 2020
26 °C

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸೌಧದಲ್ಲಿ ಬಹುನಿರೀಕ್ಷಿತ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಸಭೆಗೆ ಗೈರು ಹಾಜರಾಗಿರುವ ಒಂಬತ್ತ ಶಾಸಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಶಾಸಕರಾದ ಎಂಟಿಬಿ ನಾಗರಾಜ್, ಅಂಜಲಿ ನಿಂಬಾಳ್ಕರ್, ಸುಧಾಕರ್, ರಾಜೇಗೌಡ, ಸಂಗಮೇಶ್ ಭದ್ರಾವತಿ, ಶ್ರೀಮಂತ ಪಾಟೀಲ ರೋಷನ್‌ ಬೇಗ್, ರಾಮಲಿಂಗಾರೆಡ್ಡಿ, ತುಕಾರಾಂ ಸಭೆಯಲ್ಲಿ ಪಾಲ್ಗೊಂಡಿಲ್ಲ.

ಸಭೆಯಲ್ಲಿ ಪಾಲ್ಗೊಂಡಿರುವ ಸೌಮ್ಯಾರೆಡ್ಡಿ ತಮ್ಮ ನಿರ್ಧಾರವನ್ನು ನಂತರ ತಿಳಿಸುವುದಾಗಿ ಈ ಮೊದಲು ಹೇಳಿದ್ದರು. ಸಭೆಯಲ್ಲಿ ಪಾಲ್ಗೊಂಡಿರುವ ಶಾಸಕರು ‘ಮೈತ್ರಿ ಸಾಕು’ ಎನ್ನುತ್ತಿದ್ದಾರೆ ಎಂದು ಸುದ್ದಿ ಚಾನೆಲ್‌ಗಳು ವರದಿ ಮಾಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.