ಮುಂಬೈಗೆ ಹೋಗಿರಲಿಲ್ಲ: ಪ್ರತಾಪಗೌಡ ಸ್ಪಷ್ಟನೆ

7

ಮುಂಬೈಗೆ ಹೋಗಿರಲಿಲ್ಲ: ಪ್ರತಾಪಗೌಡ ಸ್ಪಷ್ಟನೆ

Published:
Updated:
Prajavani

ಮಸ್ಕಿ: ಅತೃಪ್ತ ಶಾಸಕರ ಜೊತೆ ನಾನು ಮುಂಬೈಗೆ ಹೋಗಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ ಸ್ಪಷ್ಟಪಡಿಸಿದ್ದಾರೆ.

‘ಸಂಕ್ರಾಂತಿ ನಿಮಿತ್ತ ಕುಟುಂಬದ ಸದಸ್ಯರ ಜೊತೆ ಕೊಲ್ಲಾಪುರ ಮಹಾಲಕ್ಷ್ಮಿ ಹಾಗೂ ಕನ್ನೇರಿ ಮಠ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ತೆರಳಿದ್ದೆ. ಆದರೆ, ಸುದ್ದಿವಾಹಿನಿಗಳಲ್ಲಿ ನಾನು ಮುಂಬೈಗೆ ಹೋಗಿದ್ದೆ ಎಂದು ಸುಳ್ಳುಸುದ್ದಿ ಬಿತ್ತರಿಸಲಾಗಿದೆ' ಎಂದು ಹೇಳಿದರು.

'ನನಗೆ ಬಿಜೆಪಿ ಯಾವ ಮುಖಂಡರೂ ಸಂಪರ್ಕ ಮಾಡಿಲ್ಲ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮುಖಂಡರು ನನ್ನ ಜೊತೆ ಮಾತನಾಡಿದ್ದಾರೆ. ಅವರಿಗೆ ಪ್ರವಾಸದಲ್ಲಿ ಇರುವ ವಿಷಯವನ್ನು ಗಮನಕ್ಕೆ ತಂದಿದ್ದೇನೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !