‘ವೀರಶೈವ ಧರ್ಮ ಶಿಥಿಲಗೊಳಿಸಲು ಶಕುನಿಗಳ ಯತ್ನ’

7

‘ವೀರಶೈವ ಧರ್ಮ ಶಿಥಿಲಗೊಳಿಸಲು ಶಕುನಿಗಳ ಯತ್ನ’

Published:
Updated:

ಬೆಳಗಾವಿ: ‘ವೀರಶೈವ ಧರ್ಮ ಶಿಥಿಲಗೊಳಿಸುವ ಯತ್ನವನ್ನು ಕೆಲವು ಶಕುನಿಗಳು ಮಾಡುತ್ತಿದ್ದಾರೆ. ಧರ್ಮಕ್ಕೆ ಚ್ಯುತಿಯಾದಾಗ ಸಮಾಜದವರು ವೀರಭದ್ರನ ರೂಪ ತಾಳಬೇಕಾದ ಅಗತ್ಯವಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಭಾಗ್ಯನಗರ ಸಿಟಿಹಾಲ್‌ನಲ್ಲಿ ಸೋಮವಾರ ನಡೆದ ಅಯ್ಯಾಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಹಿಳೆಯರು ಸಂಸ್ಕಾರ ಉಳಿಸಿಕೊಂಡು ಹೋಗಬೇಕು. ಆದರೆ, ಕೆಲವು ಬುದ್ಧಿಜೀವಿಗಳು ಹಾಗೂ ಮಠಾಧೀಶರು ಧರ್ಮದ ದಾರಿ ತಪ್ಪಿಸಲು ತಂತ್ರ, ಕುತಂತ್ರ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಬಳೆಗಳನ್ನು ಧರಿಸಬಾರದು, ಕುಂಕುಮ ಹಚ್ಚಿಕೊಳ್ಳಬಾರದು, ಹೂವು ಮುಡಿಯಬಾರದು, ಮಂಗಳಾಕ್ಷತೆ ಹಾಕಬಾರದು ಎಂದೆಲ್ಲಾ ಹೇಳುತ್ತಾರೆ. ಇಂಥವರ ವಿರುದ್ಧ ಜಾಗೃತರಾಗಬೇಕು’ ಎಂದು ತಿಳಿಸಿದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ವೀರಶೈವ ಧರ್ಮವನ್ನು ಪಾರಿಪಾಲಿಸಿದ್ದರು; ಆದರ್ಶ ಜೀವನ ನಡೆಸಿದ್ದರು. ಇಂತಹ ಧರ್ಮವನ್ನು ಒಡೆಯಲು ಕೆಲವರು ಯತ್ನಿಸುತ್ತಿದ್ದಾರೆ. ಸ್ವಾಮೀಜಿಗಳಾದವರು ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡಬೇಕೇ ಹೊರತು, ಸಮಾಜ ಒಡೆಯುವ ಕೆಲಸ ಮಾಡಬಾರದು’ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !