ಕೊರೊನಾ ಕಾರಣ ಶಾಲೆ ಆರಂಭ ಬೇಡ: ಬಸವರಾಜ ಹೊರಟ್ಟಿ

ಚಿತ್ರದುರ್ಗ: ‘ಕೊರೊನಾ ಮುಕ್ತ ರಾಜ್ಯ ನಿರ್ಮಾಣ ಆಗುವವರೆಗೂ 10ನೇ ತರಗತಿವರೆಗೆ ಶಾಲೆ ಆರಂಭಿಸದಿರುವುದೇ ಸೂಕ್ತ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರವನ್ನು ಒತ್ತಾಯಿಸಿದರು.
ಮುರುಘಾಮಠಕ್ಕೆ ಗುರುವಾರ ಭೇಟಿ ನೀಡಿದ ನಂತರ ಮಾತನಾಡಿದ ಅವರು, ‘ಒಂದನೇ ತರಗತಿಯಿಂದ ಪಿಯುವರೆಗೆ ಆನ್‌ಲೈನ್ ಶಿಕ್ಷಣ ಸಾಧ್ಯವಿಲ್ಲ. ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ರೀತಿ ಶಿಕ್ಷಣ ನೀಡುವುದು ಅಪಾಯಕಾರಿ. ಕೊರೊನಾ ಹಿನ್ನೆಲೆಯಲ್ಲಿ ಅನೇಕ ಸಂಸ್ಥೆಗಳು ಇದಕ್ಕೆ ಒತ್ತು ನೀಡುತ್ತಿದ್ದು, ಇದು ಸರಿಯಲ್ಲ’ ಎಂದರು.
‘ದಸರಾ ರಜೆ ರದ್ದು ಮಾಡಬೇಕು. ಜಯಂತಿ ಆಚರಣೆ ದಿನದ ರಜೆಗಳನ್ನು ರದ್ದುಗೊಳಿಸಬೇಕು. ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.