ಬುಧವಾರ, ಏಪ್ರಿಲ್ 1, 2020
19 °C

ಕೊರೊನಾ ಸೋಂಕು ಭೀತಿ | ರಸ್ತೆಯಲ್ಲೇ ಬೇಲಿ ಹಾಕಿ ಊರಿನ ಸಂಪರ್ಕ ‌ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವುದನ್ನು  ನಿಯಂತ್ರಣ ಮಾಡಲು ಹುಬ್ಬಳ್ಳಿ ಹೊರವಲಯದ ಅಗ್ರಹಾರ ತಿಮ್ಮಸಾಗರ ಗ್ರಾಮದ ಹಿರಿಯರು ಸಂಪರ್ಕ ಕಲ್ಪಿಸುವ ಎರಡೂ ಮಾರ್ಗಗಳಿಗೆ ರಸ್ತೆಯಲ್ಲೇ ಬೇಲಿಯ ದಿಗ್ಬಂಧನ ಹಾಕಿ, ತಮ್ಮ ರಕ್ಷಣೆಗೆ ಮುಂದಾಗಿದ್ದಾರೆ.

ಅಂಚಟಗೇರಿಯಿಂದ ತಿಮ್ಮಸಾಗರಕ್ಕೆ ಬರುವ ಮತ್ತು ಹುಬ್ಬಳ್ಳಿ ನೇಕಾರನಗರದಿಂದ ಬರುವ ರಸ್ತೆಗಳಿಗೆ ಬೇಲಿ ಹಾಕಿ ರಸ್ತೆಯನ್ನೇ ಸಂಪೂರ್ಣ ಬಂದ್ ಮಾಡಿಸಿ ಜನ ಸಂಚಾರ ಸಂಪೂರ್ಣ ಸ್ಥಗಿತ ಮಾಡಿದ್ದಾರೆ.

ಸೋಂಕು ಹರಡುವ ಭೀತಿಯಿಂದ ಈ ಕ್ರಮ ಕೈಗೊಂಡಿದ್ದು, ಊರಿಗೆ ಯಾರೂ ಬಾರದಂತೆ, ಊರಿನಿಂದ ಯಾರೂ ಹೊರಹೋಗದಂತೆ ಹೀಗೆ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು