ಶುಕ್ರವಾರ, ಏಪ್ರಿಲ್ 10, 2020
19 °C

ಚಾಲ್ತಿಯಲ್ಲಿರಲು ಎಚ್‌ಡಿಕೆ ಹೇಳಿಕೆ: ಸಿಟಿ ರವಿ ಗೇಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಳೆದುಹೋಗಬಾರದು ಎಂದು ಕೆಲವೊಮ್ಮೆ ಹೇಳಿಕೆ ನೀಡುತ್ತಾರೆ. ಬೆದರಿಕೆ ಯಾರಿಂದ ಬಂದಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕು’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂತಹ ಹೇಳಿಕೆಗಳ ಮೂಲಕ ಸಕ್ರಿಯವಾಗಿರಬಾರದು. ಜನರ ನಡುವೆ ಸಕ್ರಿಯವಾಗಿರಲು ಸಕಾರಾತ್ಮಕ ಅಂಶಗಳು ಬಹಳಷ್ಟು ಇವೆ. ಸಂಘ ಪರಿವಾರವನ್ನು ಆರೋಪಿಸುವುದು ಈಗ ‘ಫ್ಯಾಷನ್‌’ ಆಗಿದೆ. ಯಾರ ಮೂಲಕ ಬೆದರಿಕೆ ಬಂದಿದೆ ಎಂದು ದೂರು ಕೊಟ್ಟರೆ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಉತ್ತರಿಸಿದರು.

‘ಕುಮಾರಸ್ವಾಮಿ ಅವರೂ ಸೇರಿದಂತೆ ಜನಸಾಮಾನ್ಯರೆಲ್ಲರ ರಕ್ಷಣೆ ಸರ್ಕಾರದ ಹೊಣೆ. ನಾವು ಬೆದರಲ್ಲ, ಯಾರನ್ನೂ ಬೆದರಿಸುವುದೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು