ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಎರಡನೇ ಅತಿ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಕರ್ನಾಟಕ ಹೊಂದಿದೆ. ಕಳೆದ 27 ವರ್ಷಗಳಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದುಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ವರದಿ ತಿಳಿಸಿದೆ.

2017ರಲ್ಲಿ ಪ್ರತಿ 1 ಲಕ್ಷ ಮಂದಿಗೆ ಅಪಘಾತದಲ್ಲಿ ಮೃತಪಟ್ಟವರ ಪ್ರಮಾಣಕರ್ನಾಟಕದಲ್ಲಿ 16.9 ಇದೆ. ನೆರೆಯ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು ಇಲ್ಲಿ ಈ ಪ್ರಮಾಣ20 ಇದೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (15.8), ತೆಲಂಗಾಣ (14.4), ಕೇರಳ (14) ಮತ್ತು ಗೋವಾ (11.1) ಇದೆ.

ದೇಶದಲ್ಲಿಯೇ ಅಪಾಯಕಾರಿ ರಸ್ತೆಗಳನ್ನು ಉತ್ತರಾಖಂಡ ಹೊಂದಿದೆ. ಇಲ್ಲಿ ಒಂದು ಲಕ್ಷ ಮಂದಿಗೆ ಮೃತಪಡುವವರ ಪ್ರಮಾಣ 26.3 ಇದೆ.ನಂತರದ ಸ್ಥಾನದಲ್ಲಿ ಪಂಜಾಬ್ (22.9) ಇದೆ.

ಮೂರು ದಶಕಗಳಿಗೆ ಹೋಲಿಸಿದರೆ ರಸ್ತೆಗಳ ಪರಿಸ್ಥಿತಿ ಭಿನ್ನವಾಗಿದೆ. ಆಗ ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಗಿಂತ ಕರ್ನಾಟಕದ ರಸ್ತೆಗಳು ಉತ್ತಮವಾಗಿದ್ದವು. ಗೋವಾ ಮಾತ್ರ ಕರ್ನಾಟಕಕ್ಕಿಂತ ಉತ್ತಮ ರಸ್ತೆಗಳನ್ನು ಹೊಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.