ನೀತಿ ಸಂಹಿತೆ ಸಡಿಲಕ್ಕೆ ಉಪಮುಖ್ಯಮಂತ್ರಿ ಮನವಿ

ಭಾನುವಾರ, ಮೇ 26, 2019
32 °C

ನೀತಿ ಸಂಹಿತೆ ಸಡಿಲಕ್ಕೆ ಉಪಮುಖ್ಯಮಂತ್ರಿ ಮನವಿ

Published:
Updated:

ಹುಬ್ಬಳ್ಳಿ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯದಲ್ಲಿ ಅಧಿಕಾರಿಗಳು, ಸಚಿವರು ಬರ ನಿರ್ವಹಣಾ ಕೆಲಸ ಮಾಡಲು ಆಗದ ಸ್ಥಿತಿ ಇದೆ. ಎರಡು ತಿಂಗಳಿಂದ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತವಾಗಿದೆ. ಕಾರಣ, ಚುನಾವಣಾ ಆಯೋಗವು ನೀತಿ ಸಂಹಿತೆ ಸಡಿಲಿಸುವ ಮೂಲಕ ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮನವಿ ಮಾಡಿದರು.

ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ಸರ್ಕಾರಿ ಕೆಲಸಕ್ಕೆ ಬಳಸಿಕೊಳ್ಳದಿರುವಂತೆ, ಮುಖ್ಯಮಂತ್ರಿ, ಸಚಿವರು ನಡೆಸುವ ವಿಡಿಯೋ ಸಂವಾದಗಳಲ್ಲಿ ಪಾಲ್ಗೊಳ್ಳದಿರುವಂತೆ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್‌ ನೀಡಿದೆ. ಇದನ್ನು ತಕ್ಷಣ ಆಯೋಗ ಪುನರ್‌ ಪರಿಶೀಲಿಸಬೇಕು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಮತಪತ್ರಗಳು (ಬ್ಯಾಲೆಟ್‌ ಪೇಪರ್) ಮೂಲಕ ಚುನಾವಣೆ ನಡೆಯುತ್ತಿದ್ದ ಕಾಲದಲ್ಲೇ ದೇಶದಾದ್ಯಂತ ಕೇವಲ ಒಂದು ಅಥವಾ ಎರಡು ಹಂತದಲ್ಲಿ ಮತದಾನ ಮುಗಿಯುತ್ತಿತ್ತು. ಆದರೆ, ಈಗ ಆಧುನಿಕ ಮತಯಂತ್ರ(ವಿವಿ ಪ್ಯಾಟ್‌)ಗಳು ಬಂದಿವೆ. ಹೀಗಿರುವಾಗ ದೇಶಾದ್ಯಂತ ಕೇವಲ ಒಂದೇ ದಿನದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಇದ್ದರೂ ಚುನಾವಣಾ ಆಯೋಗವು 7 ಹಂತದಲ್ಲಿ ಎರಡು ತಿಂಗಳ ಕಾಲ ಮತದಾನ ಪ್ರಕ್ರಿಯೆ ನಡೆಸುತ್ತಿರುವುದರ ಮರ್ಮವೇನು ಎಂಬುದು ತಿಳಿಯದಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !