ಶನಿವಾರ, ಆಗಸ್ಟ್ 24, 2019
27 °C

ಈಸೂರು ಲೋಕೇಶ್ ನಿಧನ

Published:
Updated:
Prajavani

ಶಿವಮೊಗ್ಗ: ಸಾಮಾಜಿಕ ಹೋರಾಟಗಾರ, ವಕೀಲ ಈಸೂರು ಲೋಕೇಶ್ (59) ಅನಾರೋಗ್ಯದ ಕಾರಣ ಗುರುವಾರ ನಿಧನರಾದರು.

ಎಡಪಂಥೀಯ ಚಿಂತಕರಾಗಿದ್ದ ಇವರು ನಕ್ಸಲ್‌ ಚಳವಳಿ ಜತೆಗೂ ಗುರುತಿಸಿಕೊಂಡಿದ್ದರು.

ತುಂಗ–ಭದ್ರಾ ಉಳಿಸಿ ನದಿ ಆಂದೋಲನ, ಭೂಮಿ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಸವಳಂಗ ಸಮೀಪದ ಅವರ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂಪರ್ಕಕ್ಕೆ: 9113205893.

Post Comments (+)