ನಾಡಿಗೆ ಬಂದ ಕಡವೆ ಸಾವು

7

ನಾಡಿಗೆ ಬಂದ ಕಡವೆ ಸಾವು

Published:
Updated:
Deccan Herald

ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಶನಿವಾರ ಪಟ್ಟಣಕ್ಕೆ ಬಂದ ಕಡವೆಯೊಂದು ಸಾರ್ವಜನಿಕರು ರಕ್ಷಣೆ ಮಾಡಿದ ನಂತರ ಹೃದಯಾಘಾತದಿಂದ ಮೃತಪಟ್ಟಿದೆ.

ಪಟ್ಟಣ ಸಮೀಪದ ಕೆಂಕೆರೆ ಭಾಗದಿಂದ ಎಚ್‌.ಡಿ.ಕೋಟೆ ಕಡೆಗೆ ಬಂದ ಕಡವೆಯನ್ನು ನಾಯಿಗಳು ಬೆನ್ನಟ್ಟಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಅಂಬೇಡ್ಕರ್ ಭವನದ ಸಮೀಪ ನಾಯಿಗಳಿಂದ ರಕ್ಷಣೆ ಮಾಡಿ ಕಡವೆಯನ್ನು ಸೆರೆ ಹಿಡಿದಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಕಡವೆಯನ್ನು ವಶಕ್ಕೆ ಪಡೆದು ಪಶು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !