ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಕೋವಿಡ್‌ ಚಿಕಿತ್ಸೆಗೆ ರೈಲು ನಿಲ್ದಾಣಗಳ ಬಳಕೆ

ಎರಡು ಕಡೆ ಐಸೋಲೇಷನ್ ಕೋಚ್‌ಗಳು...
Last Updated 15 ಜೂನ್ 2020, 21:08 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಪೀಡಿತರ ಸಂಖ್ಯೆ ದಿನೇದಿನೇ ದ್ವಿಗುಣ ಗೊಳ್ಳುತ್ತ ಸಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ರೈಲು ನಿಲ್ದಾಣಗಳನ್ನು ವೈದ್ಯಕೀಯ ಸೌಲಭ್ಯಕ್ಕೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೆಹಲಿ ಪೂರ್ವ ಭಾಗದಲ್ಲಿನ ಆನಂದ ವಿಹಾರ್ ಪ್ರದೇಶದಲ್ಲಿರುವ ಅತ್ಯಂತ ಜನನಿಬಿಡ ರೈಲು ನಿಲ್ದಾಣ ಹಾಗೂ ಶಕುರ್‌ ಬಸ್ತಿ ರೈಲು ನಿಲ್ದಾಣಗಳಲ್ಲಿ ಪ್ರತ್ಯೇಕ ಬೋಗಿಗಳನ್ನು (ಐಸೋ ಲೇಷನ್‌ ಕೋಚಸ್‌) ಇರಿಸಲು ಸಿದ್ಧಪಡಿ ಸಲಾಗುತ್ತಿದೆ.

ಈ ನಿಲ್ದಾಣಗಳಿಂದ ಅಸ್ಸಾಂ, ಬಿಹಾರ್‌, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದತ್ತ ತೆರಳುವ ಎಲ್ಲ ರೈಲುಗಳ ಸಂಚಾರವನ್ನು ಈ ನಿಲ್ದಾಣದಿಂದ ಸೋಮವಾರ
ದಿಂದಲೇ ರದ್ದುಪಡಿಸಿರುವ ರೈಲ್ವೆ ಇಲಾಖೆ, ಸೋಂಕಿತರ ಚಿಕಿತ್ಸೆಗೆ ಅನುಕೂಲ ಕಲ್ಪಿ ಸುವ ನಿಟ್ಟಿನಲ್ಲಿ ಬಳಸಲು ಮುಂದಾಗಿದೆ.

ಈ ಮೂಲಕ ಕೋವಿಡ್–19 ಸೋಂಕಿತರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ರೈಲ್ವೆ ನಿಲ್ದಾಣಗಳನ್ನೇ ಮೀಸಲಿ ಡಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ಸರ್ಕಾರದೊಂದಿಗೆ ಇನ್ನೊಂದು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಇಲ್ಲಿ ಎಷ್ಟು ಕೋಚ್‌ಗಳನ್ನು ಇರಿಸಬೇಕು ಎಂಬ ನಿರ್ಧಾರ ಪ್ರಕಟಿಸಲಾಗುವುದು. ಬಹುಶಃ ಮಂಗಳವಾರ ಅಥವಾ ಬುಧವಾರದಿಂದ ಈ ಕೋಚ್‌ಗಳು ರೋಗಿಗಳ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT