ಸೋಮವಾರ, ಜನವರಿ 27, 2020
27 °C

ಪೇಜಾವರ ಶ್ರೀ ಗುಣಮುಖರಾಗಲು ಮಂತ್ರಾಲಯದಲ್ಲಿ ಹೋಮ, ಹವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ‘ಅನಾರೋಗ್ಯದಿಂದ ಬಳಲುತ್ತಿರುವ ಉಡುಪಿ ಪೇಜಾವರ ಮಠದ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ದೇಶ–ವಿದೇಶಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ಹೋಮ, ಹವನ, ಭಜನೆ, ಪ್ರಾರ್ಥನೆ ಹಾಗೂ ಪಾರಾಯಣ ಆರಂಭಿಸಲಾಗಿದೆ’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ತಿರುಪತಿ ಶ್ರೀನಿವಾಸ ದೇವರ ದರ್ಶನಕ್ಕೆ ತೆರಳಿರುವ ಅವರು ವಿಡಿಯೋ ದೃಶ್ಯಾವಳಿ ಮೂಲಕ ಮಾಹಿತಿ ನೀಡಿದ್ದು, ‘ಪೇಜಾವರ ಶ್ರೀಗಳ ಹೆಸರಿನಲ್ಲಿ ಭಕ್ತಿ, ಶ್ರದ್ಧೆಯಿಂದ ಸಂಕಲ್ಪ ಮಾಡಬೇಕು. ಹರಿವಾಯು ಸ್ತುತಿ, ವಿಷ್ಣು ಸಹಸ್ರನಾಮ, ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ, ಬನ್ನಿಸೂಕ್ತ ಹಾಗೂ ಮೃತ್ಯುಂಜಯ ಮಂತ್ರದ ವಿಶೇಷ ಪಾರಾಯಣ ಮಾಡುವಂತೆ ಅವರು ಮಠಗಳ ಶಿಷ್ಯರಿಗೆ ಹಾಗೂ ಸಿಬ್ಬಂದಿಗೆ ಸಂದೇಶ ರವಾನಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು