ನಾನು ಎಂಟಿಬಿ ಒಟ್ಟಿಗೆ ಇರ್ತೀವಿ, ಒಟ್ಟಿಗೆ ಸಾಯ್ತೀವಿ: ಡಿಕೆಶಿ ಭಾವುಕ ಹೇಳಿಕೆ

ಬುಧವಾರ, ಜೂಲೈ 17, 2019
27 °C

ನಾನು ಎಂಟಿಬಿ ಒಟ್ಟಿಗೆ ಇರ್ತೀವಿ, ಒಟ್ಟಿಗೆ ಸಾಯ್ತೀವಿ: ಡಿಕೆಶಿ ಭಾವುಕ ಹೇಳಿಕೆ

Published:
Updated:

ಬೆಂಗಳೂರು: ಎಂಟಿಬಿ ನಾಗರಾಜ್ ಜೊತೆಗೆ ಸುದೀರ್ಘ ಮಾತುಕತೆಯ ನಂತರ ಸಂತೃಪ್ತ ಭಾವದಲ್ಲಿ ಮಾಧ್ಯಮಗಳ ಎದುರು ಬಂದು ನಿಂತ ಸಚಿವ ಡಿ.ಕೆ.ಶಿವಕುಮಾರ್, ‘ಸತತ 40 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಎಂಟಿಬಿ ನಾಗರಾಜ್ ತುಂಬಾ ಕಷ್ಟದ ಸಂದರ್ಭಗಳಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಕಾಪಾಡಿದ್ದಾರೆ. ನಾವು ಸದಾ ಜೊತೆಗಿರೋಣ, ಜೊತೆಗೆ ಸಾಯೋಣ. ಹಳೆಯದನ್ನು ಮರೆತು ಒಗ್ಗಟ್ಟಿನಿಂದ ಮುನ್ನಡೆಯುವ ತೀರ್ಮಾನ ಮಾಡಿದ್ದೇವೆ’ ಎಂದು ಹೇಳಿದರು.

‘ಸರ್ಕಾರದ ಬಗ್ಗೆ ಅವರಿಗಿರುವ ಭಿನ್ನಾಭಿಪ್ರಾಯಗಳನ್ನು ನಮ್ಮೊಡನೆ ಹೇಳಿಕೊಂಡಿದ್ದಾರೆ. ಅವರಿಗೆ ಸ್ಪಂದಿಸುವ ಜವಾಬ್ದಾರಿಯನ್ನು ನಾನು ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತೆಗೆದುಕೊಂಡಿದ್ದೇವೆ. ಸುಧಾಕರ ಅವರನ್ನು ಸಿದ್ದರಾಮಯ್ಯ ಅವರೊಂದಿಗೆ ಭೇಟಿ ಮಾಡಿಸುವುದಾಗಿ ಎಂಟಿಬಿ ಮಾತು ಕೊಟ್ಟಿದ್ದಾರೆ. ಹಳೆಯ ಕೆಟ್ಟಗಳಿಗೆ ಮರೆತು ಮುಂದೆ ಕೆಲಸ ಮಾಡುತ್ತೇವೆ’ ಎಂದು ಡಿ.ಕೆ.ಶಿವಕುಮಾರ್ ನುಡಿದರು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !