ಯೋಗೇಶ್ವರ್‌ ವಿರುದ್ಧ ಡಿಕೆಶಿ ಏಕವಚನದಲ್ಲಿ ವಾಗ್ದಾಳಿ

ಸೋಮವಾರ, ಏಪ್ರಿಲ್ 22, 2019
31 °C

ಯೋಗೇಶ್ವರ್‌ ವಿರುದ್ಧ ಡಿಕೆಶಿ ಏಕವಚನದಲ್ಲಿ ವಾಗ್ದಾಳಿ

Published:
Updated:

ಚನ್ನಪಟ್ಟಣ: ‘ಅವನು ಗಂಡಸಾಗಿದ್ದರೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದ. ಆದರೆ ಕುಸ್ತಿ ನೋಡಲು ಬಂದ ವ್ಯಕ್ತಿಯನ್ನು ಅಖಾಡಕ್ಕೆ ಇಳಿಸಿದ್ದಾನೆ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದದಲ್ಲಿ ಸಹೋದರ ಡಿ.ಕೆ.ಸುರೇಶ್‌ ಪರ ಮತಯಾಚನೆ ಸಂದರ್ಭ ಅವರು ಮಾತನಾಡಿದರು.

‘ಅವನು ನಿಜವಾದ ಗಂಡಸೇ ಆಗಿದ್ದರೆ ಸುರೇಶ್ ವಿರುದ್ಧ ಸ್ಪರ್ಧೆ ಮಾಡುತ್ತಿದ್ದ. ಹೇಡಿಯಂತೆ ಹಿಂದೆ ಸರಿದು, ಈಗ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಅವನನ್ನ ಈ ಭಾಗದಲ್ಲಿ ಬಿಜೆಪಿ ಬಾವುಟ ಕಟ್ಟಲು ಇಟ್ಟುಕೊಂಡಿದ್ದಾರೆಅಷ್ಟೇ. ಯಡಿಯೂರಪ್ಪ ಆತನನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ. ಹೈಕಮಾಂಡ್‌ ಕೂಡ ನಿರ್ಲಕ್ಷ್ಯ ಮಾಡಿದೆ. ಆದರೂ ತಾನು ಬಿಎಸ್‌ವೈಗೆ ಬಹಳ ಹತ್ತಿರದಲ್ಲಿ ಇದ್ದೇನೆ ಎಂದು ನಂಬಿಸುತ್ತಿದ್ದಾನೆ’ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !