ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಸಗಿ ಹಕ್ಕಿನಲ್ಲಿ ಹಸ್ತಕ್ಷೇಪ ಬೇಡ’

Last Updated 26 ಜನವರಿ 2020, 20:14 IST
ಅಕ್ಷರ ಗಾತ್ರ

ಕೆಂಗೇರಿ: ‘ದೇಶದ ಕಾನೂನಿನಡಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಸ್ವಾತಂತ್ರ್ಯ ಪೂರ್ವಕವಾಗಿ ಜೀವನ ನಡೆಸುವ ಹಕ್ಕು ಹೊಂದಿದ್ದಾರೆ. ಈ ಸವಲತ್ತನ್ನು ಬಳಸಿಕೊಂಡು ಮತ್ತೊಬ್ಬರ ಖಾಸಗಿ ಬದುಕಿಗೆ, ಜೀವನದ ಹಕ್ಕುಗಳಿಗೆ ಭಂಗವನ್ನುಂಟು ಮಾಡುವುದಕ್ಕೆ ಯಾರಿಗೂ ಅವಕಾಶವಿಲ್ಲ’ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ತಿಳಿಸಿದರು.

ರಾಜ್ಯ ಎನ್‌ಎಸ್ಎಸ್‌ ಘಟಕ, ಕೇಂದ್ರ ಸರ್ಕಾರದ ಪ್ರಾಂತೀಯ ಎನ್‌ಎಸ್‌ಎಸ್‌ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ಶಿಬಿರದ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಏಕ್ ಭಾರತ್ ಶ್ರೇಷ್ಠ್ ಭಾರತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾಯಮೂರ್ತಿ ಆರ್‌. ನಟರಾಜ್‌ ಮಾತನಾಡಿ, ‘ಧಾರ್ಮಿಕ ಆಚರಣೆಗಳು ಸಹಜ. ಅವುಗಳು ಮನೆಯೊಳಗೆ ಸಾಂಗವಾಗಿ ನೆರವೇರಲಿ. ಅದರಿಂದೀಚೆಗೆ ನಾವೆಲ್ಲರೂ ಒಂದೇ. ಭಾರತೀಯರೆಂಬ ಭಾವನಮ್ಮಲ್ಲಿ ಏಕತೆಯನ್ನು ತರಲಿ’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ‘5ನೇ ಶತಮಾನದಲ್ಲೇ ಭೂಮಿ ದುಂಡಗಿದೆ ಎಂದು ಭಾರತದ ಖಗೋಳಶಾಸ್ತ್ರಜ್ಞರು ಹೇಳಿದ್ದರು. ಇಂತಹ ಪ್ರಬುದ್ಧ ವಿದ್ವಾಂಸರನ್ನು ಹೊಂದಿದ್ದ ದೇಶ ಇಂದುಬೌದ್ಧಿಕ ದಿವಾಳಿತನ ಎದುರಿಸುತ್ತಿರು ವುದು ದುರ್ದೈವ’ ಎಂದು ಹೇಳಿದರು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಕೆ.ವಿ.ಖಾದ್ರಿ ನರಸಿಂಹಯ್ಯ, ಎನ್‌ಎಸ್‌ಎಸ್‌ ರಾಜ್ಯ ಸಂಯೋಜನಾಧಿಕಾರಿಡಾ. ಗಣನಾಥ ಶೆಟ್ಟಿ ಎಕ್ಕಾರು, ಬೆಂಗಳೂರು ವಿವಿಯ ಕುಲಸಚಿವ ಡಾ.ಬಿ.ಕೆ.ರವಿ, ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ಎನ್. ಸತೀಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT