ರಾಜ್ಯದ ಆಡಳಿತಕ್ಕೆ ಡ್ರೋನ್‌ ‘ಗರಿ’

7

ರಾಜ್ಯದ ಆಡಳಿತಕ್ಕೆ ಡ್ರೋನ್‌ ‘ಗರಿ’

Published:
Updated:
Deccan Herald

ಮನರಂಜನೆ, ಮದುವೆ ಮುಂತಾದವುಗಳ ಛಾಯಾಗ್ರಹಣಕ್ಕೆ ಸೀಮಿತವಾಗಿದ್ದ ಮಾನವ ರಹಿತ ವೈಮಾನಿಕ ವ್ಯವಸ್ಥೆ ಅಥವಾ ‘ಡ್ರೋನ್‌’ ಇನ್ನು ಮುಂದೆ ಜನಪರ ಕಾರ್ಯಗಳಿಗೂ ಬಳಕೆ ಆಗಲಿದೆ. ರಾಜ್ಯ ಸರ್ಕಾರ ಮೊದಲ ಬಾರಿಗೆ ಆಡಳಿತಕ್ಕೆ ವ್ಯವಸ್ಥೆಗೆ ಡ್ರೋನ್‌ ಅನ್ನು ಸೇರ್ಪಡೆಗೊಳಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್‌ ಗುರುವಾರ ಡ್ರೋನ್‌ ಹಾರಾಟಕ್ಕೆ ಚಾಲನೆ ನೀಡುವ ಮೂಲಕ ಸರ್ಕಾರದ ವ್ಯವಸ್ಥೆಗೆ ಸೇರಿಸಿದರು. ಕರ್ನಾಟಕದಲ್ಲಿ ಕೃಷಿ, ನಗರಾಭಿವೃದ್ಧಿ ಮತ್ತು ಪೊಲೀಸ್‌ ನಾಗರಿಕ ಕಾರ್ಯಾಚರಣೆಗೆ ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ

**

ಡಾ.ಕೆ.ಕಸ್ತೂರಿ ರಂಗನ್‌ ಅಧ್ಯಕ್ಷತೆಯ ಕರ್ನಾಟಕ ಜ್ಞಾನ ಆಯೋಗದ ಶಿಫಾರಸಿನಂತೆ ಪೈಲಟ್‌ ಯೋಜನೆ ಆಗಿ ಡ್ರೋನ್‌ ಬಳಕೆ. 

**

1  ಕೃಷಿ:

 ಎಲ್ಲಿ ಪ್ರಯೋಗ: ಹಾವೇರಿ ಜಿಲ್ಲೆ ಮತ್ತು ಕಸಬಾ ಹೋಬಳಿ

* 200 ಚದರ ಕಿ.ಮೀ ವಿಸ್ತೀರ್ಣ ಪ್ರದೇಶ ಬೆಳೆಗಳ ವಿಧ, ಅವುಗಳ ವ್ಯಾಪ್ತಿ, ಬೆಳೆ  ಆರೋಗ್ಯ, ಇಳುವರಿ ಪ್ರಮಾಣ ಮತ್ತು ಕೀಟ ಬಾಧೆಯ ಬಗ್ಗೆ ಮುನ್ಸೂಚನೆ

**

2 ನಗರಾಭಿವೃದ್ಧಿ:

* ಎಲ್ಲಿ ಪ್ರಯೋಗ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ 

* 60 ಚದರ ಕಿ.ಮೀ ವಿಸ್ತೀರ್ಣ ಪ್ರದೇಶ.

ಪಟ್ಟಣದ ಸುವ್ಯವಸ್ಥಿತ ಅಭಿವೃದ್ಧಿಗೆ ವಿಸ್ತೃತ ನಕ್ಷೆ ತಯಾರಿಕೆ, ಆಸ್ತಿ ತೆರಿಗೆ ಅಂದಾಜು ಮಾಡಿ ಮಾಹಿತಿ ರವಾನೆ.(ಅಕ್ಟೋಬರ್‌ನಲ್ಲಿ ಯೋಜನೆಗೆ ಚಾಲನೆ)

**

3 ಪೊಲೀಸ್‌ ನಾಗರಿಕ ಕಾರ್ಯಾಚರಣೆ:

* ಬೆಂಗಳೂರು ನಗರ ವ್ಯಾಪ್ತಿ

ಜನರ ಗುಂಪು ನಿರ್ವಹಣೆ, ಆಯ್ದ ಸ್ಥಳಗಳಲ್ಲಿ ಮೂರು ತಿಂಗಳ ಕಾಲ ವಾಹನ ದಟ್ಟಣೆ ಕಣ್ಗಾವಲು.

**

ಅನುಷ್ಠಾನದ ಏಜೆನ್ಸಿ: ಆಮ್ನಿ ಪ್ರೆಸೆಂಟ್‌ ರೋಬೋಟ್‌ ಟೆಕ್ನಾಲಜಿ ಪ್ರೈ.ಲಿ

**

ಡ್ರೋನ್‌ ಬಳಕೆಯಿಂದ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಅಂದಾಜು ಇನ್ನು ಹೆಚ್ಚು ನಿಖರವಾಗಿ ಮಾಡಬಹುದು. ಇದರಿಂದ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಆದಾಯ ಹೆಚ್ಚಾಗುತ್ತದೆ.
– ಕೆ.ಜೆ.ಜಾರ್ಜ್‌, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

**

ಡ್ರೋನ್‌ ಬಳಕೆಯಿಂದ ಭೂ ಸಮೀಕ್ಷೆ, ಮಣ್ಣಿನ ಆರೋಗ್ಯ, ಅದರಲ್ಲಿನ ಪೋಷಕಾಂಶಗಳ ಬಗ್ಗೆ ನಿಖರ ಮಾಹಿತಿ ಪಡೆಯಬಹುದು. ತೇವಾಂಶ ಮತ್ತು ಕೀಟ ಬಾಧೆಯ ಬಗ್ಗೆ ಮುನ್ಸೂಚನೆ ಪಡೆಯಬಹುದು. ಕೃಷಿ ಇಲಾಖೆಗೆ ಇದರ ಅಗತ್ಯವಿದೆ. 
– ಎನ್‌.ಎಚ್‌.ಶಿವಶಂಕರ ರೆಡ್ಡಿ, ಕೃಷಿ ಸಚಿವ

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !