ಭಾನುವಾರ, ಜನವರಿ 26, 2020
18 °C

ಸಂಕ್ರಾಂತಿ ಹಬ್ಬ; ನದಿಯಲ್ಲಿ ಮುಳುಗಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ: ಇಲ್ಲಿಗೆ ಸಮೀಪದ ಒಡಕಹೊಳಿ ಗ್ರಾಮದ ತಟದ ಕುಮಾರೇಶ್ವರ ಮಠದ ಹತ್ತಿರ ಮಲಪ್ರಭಾ ನದಿಯಲ್ಲಿ ಬುಧವಾರ ಸಂಕ್ರಾಂತಿ ಹಬ್ಬದ ದಿನದಂದು ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕರೀಕಟ್ಟಿ ಗ್ರಾಮದ ಶಿವಪುತ್ರಪ್ಪ ಉಪ್ಪಾರ (21) ಹಾಗೂ ಮರೇವಾಡ ಗ್ರಾಮದ ರಾಜೇಸಾಬ ಮಕ್ತುಮಸಾಬ ಕರೀಕಟ್ಟಿ (36) ಮೃತಪಟ್ಟ ದುರ್ದೈವಿಗಳು. ಹಬ್ಬದ ನಿಮಿತ್ತ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೂಡಿ ಅವರು ಬಂದಿದ್ದರು. ಸ್ನಾನಕ್ಕೆಂದು ನದಿಯಲ್ಲಿ ಇಳಿದಾಗ, ಆಳ ತಿಳಿಯದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. 

ಅಗ್ನಿ ಶಾಮಕ ಇಲಾಖೆಯ ಎಂ.ಕೆ. ಕಲಾದಗಿ ಹಾಗೂ ಸಿಬ್ಬಂದಿಗಳು ಸತತ ಎರಡೂವರೆ ಗಂಟೆಗಳ ಕಾಲ ನದಿಯಲ್ಲಿ ಶೋಧ ಕಾರ್ಯ ನಡೆಸಿ ಶವಗಳನ್ನು ಹೊರತೆಗೆದರು. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು