ಚುನಾವಣೆ ವೇಳೆ ಮತದಾರರಿಗೆ ಹಣ ನೀಡಿ, ಸೋತ ಬಳಿಕ ವಾಪಸ್‌ ಕೇಳಿದ ಅಭ್ಯರ್ಥಿ

7

ಚುನಾವಣೆ ವೇಳೆ ಮತದಾರರಿಗೆ ಹಣ ನೀಡಿ, ಸೋತ ಬಳಿಕ ವಾಪಸ್‌ ಕೇಳಿದ ಅಭ್ಯರ್ಥಿ

Published:
Updated:

ಮಧುಗಿರಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ 19ನೇ ವಾರ್ಡ್‌ನಿಂದ ಸ್ಪರ್ಧಿಸಿ ಸೋತ ಪಕ್ಷೇತರ ಅಭ್ಯರ್ಥಿ ಸಿ.ರಾಜು, ‘ನೀವು ನನಗೆ ಮತ ನೀಡದೆ ಸೋಲಿಸಿದ್ದೀರಿ. ಚುನಾವಣೆ ವೇಳೆ ನಾನು ನಿಮಗೆ ನೀಡಿದ ಹಣ ವಾಪಸ್ ಕೊಡಿ’ ಎಂದು ಮತದಾರರ ಮನೆ ಮನೆಗೆ ತೆರಳಿ ಒತ್ತಾಯಿಸುತ್ತಿದ್ದಾರೆ. ಇದು ಹಣ ಪಡೆದವರಿಗೆ ಮುಜುಗರ ತಂದಿದ್ದರೆ ಉಳಿದವರಲ್ಲಿ ನಗೆಪಾಟಲಿಗೆ ಕಾರಣವಾಗಿದೆ!

‘ಮತದಾರರ ಮನೆ ಬಾಗಿಲಿಗೆ ಬರುತ್ತಿರುವ ಅವರು, ಚೆನ್ನಾಗಿದ್ದೀರಾ. ನಾನು ಚುನಾವಣೆಯಲ್ಲಿ ಸೋತೆ. ವಾರ್ಡ್‌ನವರು 37 ಮತಗಳನ್ನು ಹಾಕಿದ್ದೀರಿ. ನಾನು ಕೊಟ್ಟಿದ್ದ ಹಣ ವಾಪಸ್ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಅವರಿಂದ ಹಣ ಪಡೆದವರ ಮನೆಗೆ ಮಾತ್ರ ಹೋಗುತ್ತಿದ್ದಾರೆ’ ಎಂದು ಹೆಸರು ಬರೆಯದಂತೆ ಷರತ್ತು ವಿಧಿಸುವ ನಾಗರಿಕರೊಬ್ಬರು ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !