ಬುಧವಾರ, ನವೆಂಬರ್ 20, 2019
22 °C

ಉಪಚುನಾವಣೆ ಮುಂದೂಡಿಕೆ: ಸುಪ್ರೀಂಗೆ ಅನರ್ಹ ಶಾಸಕರ ಮನವಿ

Published:
Updated:

ನವದೆಹಲಿ: ರಾಜ್ಯದ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆ ಮುಂದೂಡುವಂತೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಗೆ ಶುಕ್ರವಾರ ಮೌಖಿಕ ಮನವಿ ಸಲ್ಲಿಸಿದ್ದಾರೆ.

 ಸೋಮವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ ಆಗಲಿದ್ದು, ನಮ್ಮ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಕಾಯ್ದಿರಿಸಲಾಗಿದೆ. ಸೋಮವಾರ ಮತ್ತು ಮಂಗಳವಾರ ಕೋರ್ಟ್ಗೆ ರಜೆ ಇರುವ ಕಾರಣ ತೀರ್ಪು ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು' ಎಂದು ಅನರ್ಹರ ಪರ‌ ವಕೀಲ ಮುಕುಲ್ ರೋಹಟ್ಗಿ ಮನವಿ ಮಾಡಿದರು.

ಆದರೆ, ಇದಕ್ಕೆ ನಿರಾಕರಿಸಿದ ನ್ಯಾಯಪೀಠ ಅರ್ಜಿ‌ ಸಲ್ಲಿಸುವಂತೆ ಸೂಚಿಸಿತು. ಈ ಕುರಿತು ಬುಧವಾರ ಮೇಲ್ಮನವಿ ಸಲ್ಲಿಸಲಾಗುವುದು ಎಂದು ರೋಹಟ್ಗಿ ಹೇಳಿದರು

ಪ್ರತಿಕ್ರಿಯಿಸಿ (+)