ಸೋಮವಾರ, ಸೆಪ್ಟೆಂಬರ್ 23, 2019
28 °C

ವಿದ್ಯುತ್‌ ಅವಘಡದಲ್ಲಿ ಒಂದೇ ಕುಟುಂಬದ ಮೂವರ ಸಾವು

Published:
Updated:

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಅಗಸರಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ವಿದ್ಯುತ್ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ಮೂವರ ಧಾರುಣವಾಗಿ ಸಾವಿಗೀಡಾಗಿದ್ದಾರೆ. 

ಭಾಗ್ಯಮ್ಮ(48), ದಾಕ್ಷಾಯಿಣಿ(30), ದಯಾನಂದ(23)ಮೃತರು. ಮನೆ ಮುಂದೆ‌ ತುಂಡಾಗಿ‌ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಈ ಅವಘಡ ಸಂಭವಿಸಿದೆ.  

ಬೆಳ್ಳಂಬೆಳಗ್ಗೆ ಬಟ್ಟೆ ತೊಳೆದು ಒಣಹಾಕಲು ಹೋಗಿದ್ದ ದಾಕ್ಷಾಯಿಣಿ ಅವರಿಗೆ ಮೊದಲು ವಿದ್ಯುತ್‌ ತಗುಲಿದೆ. ಮಗಳನ್ನು ರಕ್ಷಿಸಲು ಹೋದ ತಾಯಿ ಗೌರಮ್ಮ ಮತ್ತು ಸೋದರ ದಯಾನಂದ್‌ ಅವರೂ ವಿದ್ಯುತ್‌ಗೆ ಸಿಲುಕಿದ್ದಾರೆ.

ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Post Comments (+)