ಆನೆ ದಾಳಿ: ಯುವಕನಿಗೆ ಗಾಯ

ಶನಿವಾರ, ಮೇ 25, 2019
26 °C

ಆನೆ ದಾಳಿ: ಯುವಕನಿಗೆ ಗಾಯ

Published:
Updated:
Prajavani

ಮಾಲೂರು: ತಾಲ್ಲೂಕಿನ ಅರಳೇರಿ ಗ್ರಾಮದ ಬಳಿ ಬುಧವಾರ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು ರಾಜಪ್ಪ (28) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ದಿನಗಳಿಂದ ತಾಲ್ಲೂಕಿನಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಬಂಟಹಳ್ಳಿ, ಡಿ.ಎನ್.ದೊಡ್ಡಿ ಗ್ರಾಮಗಳ ಬಳಿ ಕಾಣಿಸಿಕೊಂಡಿದ್ದ ಆರು ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿ ಧನಲಕ್ಷ್ಮಿ ಮತ್ತು ಸಿಬ್ಬಂದಿ ತಮಿಳುನಾಡು ಅರಣ್ಯದತ್ತ ಓಡಿಸಿದ್ದರು. ಬುಧವಾರ ಮುಂಜಾನೆ ಮತ್ತೆ ಅರಳೇರಿ ಗ್ರಾಮದ ಬಳಿ ಇದೇ ಹಿಂಡು ಕಾಣಿಸಿಕೊಂಡಿದೆ.

ರೈತ ರಾಜಪ್ಪ ಅವರ ಜಮೀನಿನತ್ತ ಆನೆಗಳು ನುಗ್ಗಿದ್ದು ಈ ವೇಳೆ ಅಲ್ಲಿದ್ದ ಅವರ ಮೇಲೆ ದಾಳಿ ನಡೆಸಿವೆ. ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !