ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲಿವೇಟ್‌: ಅಂತಿಮ ಸುತ್ತಿಗೆ 270 ನವೋದ್ಯಮಗಳ ಆಯ್ಕೆ

Last Updated 22 ಜುಲೈ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದ ಎಲ್ಲೆಡೆ ಇರುವ ನವೋದ್ಯಮಗಳಿಗೆ ಸಮಗ್ರ ಉದ್ಯಮಶೀಲತೆಯ ವೇದಿಕೆ ಒದಗಿಸುವ ‘ಎಲಿವೇಟ್‌’ ಕಾರ್ಯಕ್ರಮದ ಅಂತಿಮ ಸುತ್ತಿಗೆ 270 ನವೋದ್ಯಮಗಳು ಆಯ್ಕೆಯಾಗಿವೆ. ಇದೇ 29ರಂದು ಕಾರ್ಯಕ್ರಮ ನಡೆಯಲಿದೆ.

190 ಮಹಿಳಾ ಉದ್ಯಮಿಗಳ ಅರ್ಜಿ ಸೇರಿದಂತೆ ಒಟ್ಟು 729 ಅರ್ಜಿಗಳನ್ನು ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸ್ವೀಕರಿಸಿತ್ತು.ಮೈಸೂರು, ಮಂಗಳೂರು, ಕಲಬುರ್ಗಿ, ಬೆಳಗಾವಿ ಮತ್ತು ಬೆಂಗಳೂರಿನಿಂದ ಬಂದಿದ್ದ 480 ಅರ್ಜಿಗಳ ಪೈಕಿ 270 ನವೋದ್ಯಮಗಳನ್ನು ಆಯ್ಕೆ ಮಾಡಲಾಗಿದೆ.ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು ಪರಿಸರ ವ್ಯವಸ್ಥೆ ಪಾಲುದಾರರಿಂದ ಬಂದ ಗಣ್ಯ ತೀರ್ಪುಗಾರರ ಸಮಿತಿ ಈ ಪ್ರವೇಶಗಳನ್ನು ಪರಿಶೀಲಿಸಿದೆ. ಈ ನವೋದ್ಯಮಗಳಿಗೆ ಒಂದು ದಿನದ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಿದೆ.

ಈ ಕಾರ್ಯಕ್ರಮದ ಮೂಲಕ ನವೋದ್ಯಮಗಳಿಗೆ ಆರಂಭದ ನಿಧಿನೆರವು ನೀಡಲಾಗುತ್ತದೆ. ಅಲ್ಲದೆ,ಆಯಾ ಕ್ಷೇತ್ರದ ಪರಿಣತರು, ಮತ್ತುಮಾರ್ಗದರ್ಶಕರೊಂದಿಗೆ ಸಂಪರ್ಕವನ್ನೂ ಕಲ್ಪಿಸಿಕೊಡಲಾಗುತ್ತದೆ.

‘ಈವರೆಗೆ ಎಲಿವೇಟ್‌ ಕಾರ್ಯಕ್ರಮದ ಮೂಲಕ ₹62 ಕೋಟಿ ನಿಧಿ ನೆರವನ್ನು 264 ನವೋದ್ಯಮಗಳು ಪಡೆದಿವೆ. ಉದ್ಯೋಗಾವಕಾಶ
ಗಳಲ್ಲಿ ಶೇ 70ರಷ್ಟು ಹೆಚ್ಚಳವಾಗಿದೆ. ಹಣ ಪಾವತಿಸುವ ಗ್ರಾಹಕರ ಪ್ರಮಾಣದಲ್ಲಿ ಶೇ 104ರಷ್ಟು ಹೆಚ್ಚಾಗಿದೆ’ ಎಂದುಐಟಿ, ಬಿಟಿ ಇಲಾಖೆಯ ಪ್ರಧಾನಕಾರ್ಯದರ್ಶಿ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT