ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತರೂ ಸಿಹಿ ಹಂಚಿದ ಬಿಜೆಪಿ

ಎಚ್ಚರಿಕೆಯ ಸಂದೇಶ ನೀಡಿದ ಮತದಾರ, ಪಕ್ಷೇತರ ಅಭ್ಯರ್ಥಿಗಳಿಗೂ ಮಣೆ
Last Updated 7 ನವೆಂಬರ್ 2018, 20:18 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಎಲ್‌.ಆರ್.ಶಿವರಾಮೇಗೌಡ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಸೋಲು ಕಂಡಿದ್ದರೂ ಮತ ಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ.

ಎಲ್‌.ಆರ್.ಶಿವರಾಮೇಗೌಡ 3,24,943 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಆ ಮೂಲಕ 1998ರಲ್ಲಿ ಅಂಬರೀಷ್‌ ನಿರ್ಮಿಸಿದ್ದ 1.80 ಲಕ್ಷ ಮತಗಳ ಅಂತರದ ದಾಖಲೆ ಹಿಂದಿಕ್ಕಿದರು.

ಒಟ್ಟು ಚಲಾವಣೆಗೊಂಡ 8,92,560 ಮತಗಳಲ್ಲಿ ಶಿವರಾಮೇಗೌಡ 5,69,347, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ 2,44,404 ಮತ ಗಳಿಸಿದರು. ಏಳು ಪಕ್ಷೇತರ ಅಭ್ಯರ್ಥಿಗಳು 63,297 ಮತ ಪಡೆದಿದ್ದಾರೆ. ಬಿಜೆಪಿ ಸೋತರೂ, ಸಿಹಿ ಹಂಚಿ ಮುಖಂಡರು ಸಂಭ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT