ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 100 ಕೆಪಿಎಸ್‌ ಆರಂಭ

ಕೇಂದ್ರದಿಂದ ತಲಾ ₹ 50 ಲಕ್ಷ ನಿರೀಕ್ಷೆ: 3–4 ವರ್ಷದಲ್ಲಿ ಪೂರ್ಣ ಪ್ರಮಾಣದ ವ್ಯವಸ್ಥೆ
Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ 176 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು (ಕೆಪಿಎಸ್) ಆರಂಭಿಸಿದ್ದ ಸರ್ಕಾರ ಈ ಬಾರಿ ಇನ್ನೂ 100 ಶಾಲೆಗಳನ್ನು ಆರಂಭಿಸಲಿದೆ. 3ರಿಂದ 4 ವರ್ಷಗಳ ಒಳಗೆ ಈ ಎಲ್ಲ 276 ಶಾಲೆಗಳು ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಸಜ್ಜಾಗಲಿವೆ.

‘ಕೇಂದ್ರ ಸರ್ಕಾರ ಕಳೆದ ವರ್ಷ ಈ ಶಾಲೆಗಳಿಗೆ ತಲಾ ₹ 50 ಲಕ್ಷ ನೀಡಿತ್ತು. ಈ ವರ್ಷವೂ ನೆರವು ಮುಂದುವರಿಸಲು ಕೋರಿಕೆ ಸಲ್ಲಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜೂನ್‌ 10ರಿಂದ ಆರಂಭ: ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳು ಜೂನ್‌ 10ರಿಂದ ಕಾರ್ಯಾರಂಭ ಮಾಡಲಿವೆ. ರಾಜ್ಯದ 78 ಕಡೆ ಒಂದೇ ಊರಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳು ಇದ್ದರೆ, ಕೆಲವೆಡೆ ಪದವಿ ಪೂರ್ವ ಕಾಲೇಜುಗಳು, ಪ್ರೌಢಶಾಲೆಗಳು ಇಲ್ಲ. ಆದರೆ ಈ ವರ್ಷದಿಂದ ಎಲ್ಲ 276 ಶಾಲೆಗಳಲ್ಲೂ ಎಲ್‌ಕೆಜಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT