ಖೋಟಾನೋಟು ಚಲಾವಣೆ:ಮತ್ತೊಬ್ಬ ಆರೋಪಿ ಬಂಧನ

ಮಂಗಳವಾರ, ಜೂನ್ 25, 2019
25 °C

ಖೋಟಾನೋಟು ಚಲಾವಣೆ:ಮತ್ತೊಬ್ಬ ಆರೋಪಿ ಬಂಧನ

Published:
Updated:

ಬೆಂಗಳೂರು: ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಖೋಟಾನೋಟು ಚಲಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಸ್‌.ಕೆ. ತಾಜಾಮುಲ್‌ (28) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ಈಚೆಗೆ ಬಿಹಾರದ ಚಂಪಾರಣ್‌ ಜಿಲ್ಲೆಯ ಸೊಗೌಲಿಯಲ್ಲಿ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮಾಲ್ಡಾ ಜಿಲ್ಲೆ ವೈಷ್ಣವನಗರದ ಮೋಹನ್‌ಪುರ ಪೊಲೀಸ್‌ ಠಾಣೆ ವ್ಯಾ‍ಪ್ತಿಯ ನಿವಾಸಿಯಾದ ಆರೋಪಿಯನ್ನು ಬಿಹಾರದ ಮೋತಿಹಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ವಿಜಯವಾಡ ಎನ್‌ಐಎ ವಿಶೇಷ ಕೋರ್ಟ್‌ನಲ್ಲಿ  ಹಾಜರುಪಡಿಸಲು ಐದು ದಿನಗಳ ‘ಟ್ರಾನ್ಸಿಟ್‌ ರಿಮ್ಯಾಂಡ್‌’ ಪಡೆಯಲಾಗಿದೆ.

2018ರ ಮಾರ್ಚ್‌ 31ರಂದು ವಿಶಾಖಪಟ್ಟಣದಲ್ಲಿ ರೆವಿನ್ಯೂ ಗುಪ್ತಚರ ನಿರ್ದೇಶಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದ ₹ 10.20 ಲಕ್ಷ ಖೋಟಾಮೋಟು ಪ್ರಕರಣದಲ್ಲಿ ಮೊಹಮದ್‌ ಮೆಹಬೂಬ್‌ ಬೇಗ್‌ ಅಲಿಯಾಸ್‌ ಅಜರ್‌ ಬೇಗ್‌ ಹಾಗೂ ಸಯ್ಯದ್‌ ಇಮ್ರಾನ್‌ ಎಂಬುವರನ್ನು ಬಂಧಿಸಿದ್ದರು. ಅವರು ಕೊಟ್ಟ ಸುಳಿವಿನ ಮೇಲೆ ಈಗ ತಾಜಾಮುಲ್‌ನನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಮಹಮದ್‌ ಮೆಹಬೂಬ್‌ ಬೇಗ್‌ ಹಾಗೂ ಸಯ್ಯದ್‌ ಇಮ್ರಾನ್‌ ವಿಚಾರಣೆ ವೇಳೆ, ತಾವು ಬೆಂಗಳೂರಿನಿಂದ ಮಾಲ್ಡಾಗೆ ಹೋಗಿ ತಾಜಾಮುಲ್‌ ಸಹಚರ ಸದ್ದಾಂ ಅಲಿಯಾಸ್‌ ಫೈರೋಜ್‌ ಶೇಖ್‌ ಎಂಬಾತನಿಂದ ಖೋಟಾನೋಟು ಪಡೆಯುತ್ತಿದ್ದುದ್ದಾಗಿ ಹೇಳಿದ್ದರು.

ಗಡಿಯಾಚೆಯ ತಮ್ಮ ಸಹಚರರಿಂದ ತಾಜಾಮುಲ್‌ ಖೋಟುನೋಟು ತರಿಸಿ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಲಾವಣೆ ಮಾಡಲು ಹಂಚಿಕೆ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಎನ್‌ಐಎ ಹೈದರಾಬಾದ್‌ ಅಧಿಕಾರಿಗಳು ಮೊಹಮದ್‌ ಮೆಹಬೂಬ್‌ ಬೇಗ್‌ ಮತ್ತು ಸಯ್ಯದ್‌ ಇಮ್ರಾನ್‌ ವಿರುದ್ಧ 2018ರ ಜೂನ್‌ 29ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !