ಗುರುವಾರ , ಫೆಬ್ರವರಿ 27, 2020
19 °C

ಮೈಸೂರಿನಲ್ಲಿ ಬೆಂಕಿಗೆ ಭಸ್ಮವಾದ ಗುಜರಿ ಅಂಗಡಿ: ₹30ಲಕ್ಷ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಬನ್ನಿಮಂಟಪ‍ದ ಸಿ.ವಿ.ರಸ್ತೆಯ ದಾಸ್ತಾನು ಮಳಿಗೆಗೆ ಭಾನುವಾರ ನುಸಕಿನಲ್ಲಿ ಬೆಂಕಿ ಬಿದ್ದು, ಸುಮಾರು ₹30 ಲಕ್ಷಕ್ಕೂ ಅಧಿಕ ಮೌಲ್ಯದ ಗುಜರಿ ಸರಕುಗಳು ಭಸ್ಮವಾಗಿವೆ.

ಸಮೀಪದಲ್ಲೇ ಇದ್ದ ಮನೆಗಳು, ಅಗರಬತ್ತಿ ಕಾರ್ಖಾನೆ ಹಾಗೂ ವಾಹನ ಷೋರಂ ಮಳಿಗೆಗಳಿಗೆ ಬೆಂಕಿ ಹಬ್ಬುವುದನ್ನು ಅಗ್ನಿಶಾಮಕ ಪಡೆ ತಡೆದಿದೆ.

ಬನ್ನಿಮಂಟಪ, ಸರಸ್ವತಿಪುರಂ ಹಾಗೂ ಹೆಬ್ಬಾಳದ ಅಗ್ನಿಶಾಮಕ ಠಾಣೆಗಳಿಂದ 6 ಅಗ್ನಿಶಾಮಕ ವಾಹನಗಳಲ್ಲಿ ಬಂದ 30 ಮಂದಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಗುಜರಿ ವಸ್ತುಗಳಿಗೆ ಹೊತ್ತಿದ್ದ ಬೆಂಕಿಯ ಜ್ವಾಲೆಗಳು ಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿದ್ದವು. ಮೇಯರ್ ತಸ್ನೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸದ್ಯ, ಬೆಂಕಿಯು ನಿಯಂತ್ರಣಕ್ಕೆ ಬಂದಿದೆ. ನಷ್ಟದ ಅಂದಾಜು ಇನ್ನೂ ಖಚಿತವಾಗಿಲ್ಲ. ಬೆಂಕಿ ಬಿದ್ದಿರುವ ಮಲ್ಲಿಕಾರ್ಜುನ ಎಂಟರ್‌ಪ್ರೈಸಸ್‌ನ ರೋಹಿತ್ ಅವರು ₹30ರಿಂದ ₹50 ಲಕ್ಷದಷ್ಟು ಸರಕುಗಳಿದ್ದವು ಎಂದು ಹೇಳಿದ್ದಾರೆ. ಈಗ ಸರಕುಗಳ ರಾಶಿಯನ್ನು ಜೆಸಿಬಿ ಮೂಲಕ ತೆಗೆದು ಒಳಗಿರುವ ಬೆಂಕಿಯನ್ನು ನಂದಿಸಲಾಗುತ್ತಿದೆ’ ಎಂದು ಬನ್ನಿಮಂಟಪ ಠಾಣೆ ಅಗ್ನಿಶಾಮಕ ಅಧಿಕಾರಿ ಭರತ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು