ಶನಿವಾರ, ಜೂಲೈ 4, 2020
28 °C
ಅಪಸ್ಮಾರ ಸಮಸ್ಯೆಯನ್ನೂ ಗುಣಪಡಿಸಿದ ಕಾರವಾರದ ವೈದ್ಯರು

ಐದು ತಿಂಗಳ ಮಗು ಕೋವಿಡ್ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯರು, ಐದು ತಿಂಗಳ ಹೆಣ್ಣು ಮಗುವನ್ನು (ರೋಗಿ ಸಂಖ್ಯೆ 747) ಕೋವಿಡ್ 19ನಿಂದ ಗುಣಪಡಿಸಿದ್ದಾರೆ. ಇದೇವೇಳೆ, ಆ ಮಗುವಿಗಿದ್ದ ಅಪಸ್ಮಾರ ಕಾಯಿಲೆಗೂ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. 

ಮಗುವಿನ ಅಪಸ್ಮಾರ ಚಿಕಿತ್ಸೆಗೆಂದು ಪಾಲಕರು ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದಿದ್ದರು. ಅವರಿಗೆ ಸೋಂಕು ಖಚಿತವಾಗುವ ಮೊದಲೇ ಮನೆಯಲ್ಲಿದ್ದ 18 ವರ್ಷದ ಯುವತಿಗೆ (ರೋಗಿ ಸಂಖ್ಯೆ 659) ಕೋವಿಡ್ ದೃಢಪಟ್ಟಿತ್ತು. ಬಳಿಕ ಮೇ 8ರಂದು ಮಗು ಮತ್ತು ಪಾಲಕರಿಗೆ ಸೋಂಕು ಖಚಿತವಾಗಿತ್ತು.

‘ಮಗುವಿನ ಪೋಷಕರು ಮೇ 23ರಂದು ಗುಣಮುಖರಾಗಿ ಬಿಡುಗಡೆಯಾಗಿದ್ದರು. ಆದರೆ, ಹಸುಗೂಸಿಗೆ ಅಪಸ್ಮಾರದ ಸಮಸ್ಯೆಯಿದ್ದ ಕಾರಣ ಒಟ್ಟು 19 ದಿನ ಚಿಕಿತ್ಸೆ ಮುಂದುವರಿಸಲಾಯಿತು. ಇದೇರೀತಿ, ಎರಡು ವರ್ಷದ ಬಾಲಕಿಯೂ (ರೋಗಿ ಸಂಖ್ಯೆ 1206) ಕೋವಿಡ್‌ನಿಂದ ಮುಕ್ತವಾಗಿದ್ದಾಳೆ. ಮಕ್ಕಳ ತಜ್ಞರಾದ ಡಾ.ವಿಶ್ವನಾಥ್, ಡಾ.ಸೋನಿಯಾ ಹಾಗೂ ಡಾ.ಪ್ರವೀಣ್ ಅವರ ತಂಡ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಶ್ಲಾಘಿಸಿದ್ದಾರೆ. 

76 ವರ್ಷದ ಹಿರಿಯ ಮಹಿಳೆಯೂ (ರೋಗಿ ಸಂಖ್ಯೆ 744) ಗುಣಮುಖರಾಗಿದ್ದು, ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಜಿಲ್ಲೆಯಲ್ಲಿ ಒಟ್ಟು 75 ಮಂದಿ ಸೋಂಕಿತರ ಪೈಕಿ 44 ಮಂದಿ ಸೋಂಕು ಮುಕ್ತರಾಗಿದ್ದು, 31 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು