ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ನಾರಿಹಳ್ಳ: ನೀರಿಲ್ಲದೆ ತತ್ತರ

ಒಂದೆಡೆ ಪ್ರವಾಹ, ಮತ್ತೊಂದೆಡೆ ನೀರಿಗಾಗಿ ಪರದಾಟ
Last Updated 16 ಆಗಸ್ಟ್ 2019, 10:49 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ತಾಲ್ಲೂಕಿನ ನಾರಿಹಳ್ಳ ನೀರಿಲ್ಲದೆ ಬತ್ತಿ ಹೋಗಿದೆ.

ಸಾವಿರಾರು ಎಕರೆ ಭೂಮಿಗೆ ಪರೋಕ್ಷವಾಗಿ ನೀರುಣಿಸುತ್ತಿದ್ದ ಮತ್ತು ಜನ ಜಾನುವಾರುಗಳಿಗೆ ಕುಡಿಯಲು ಆಸರೆಯಾಗಿದ್ದ ನಾರಿಹಳ್ಳ ಮುಂಗಾರು ಆರಂಭವಾಗಿದ್ದರೂ ಹನಿ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ.

ಸಂಡೂರು ಬಳಿ ಆರಂಭವಾಗುವ ನಾರಿಹಳ್ಳ ದರೋಜಿ ಕೆರೆ ಭರ್ತಿಯಾದ ನಂತರ ಕೋಡಿ ಮೂಲಕ ಜೀರಿಗನೂರು, ಬಳ್ಳಾಪುರ, ಜವುಕು, ಹಳೆ ನೆಲ್ಲುಡಿ, ಹೊಸ ನೆಲ್ಲುಡಿ, ಸುಬ್ಬರಾವ್ ಕ್ಯಾಂಪ್, ಶಾಂತಿನಗೆ, ಶಂಕರ್‍ಸಿಂಗ್‍ಕ್ಯಾಂಪ್, ನಂ.2 ಮುದ್ದಾಪುರ, ಇಟಿಗಿ ಗ್ರಾಮದ ಮೂಲಕ ಸುಮಾರು 17 ರಿಂದ 20 ಕಿ.ಮೀ ಹರಿದು ತುಂಗಭದ್ರಾ ನದಿ ಸೇರುತ್ತದೆ.

ನಾರಿಹಳ್ಳಕ್ಕೆ ಮಳೆ ನೀರು, ಮೇಲ್ಭಾಗದ ಹೊಲ ಗದ್ದೆಗಳ ಬಸಿ ನೀರು ಸೇರುತ್ತದೆ. ಜೊತೆಗೆ ತಾಲ್ಲೂಕಿನ ರೆಗ್ಯುಲೇಟರ್ ಕ್ಯಾಂಪ್ ಬಳಿಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ಎಸ್ಕೇಪ್ ಗೇಟ್‍ನಿಂದ ಕೆಲವೊಮ್ಮೆ ನೀರು ಹರಿದು ಹಳ್ಳ ಪಾತ್ರದ ಸುಮಾರು 2500ಸಾವಿರ ಎಕರೆ ಕೃಷಿ ಭೂಮಿಗೆ ನೀರಿನ ಅನುಕೂಲವಾಗುತ್ತದೆ.

ಈ ಬಾರಿ ಕನಿಷ್ಠ ವಾಡಿಕೆ ಮಳೆ ಇಲ್ಲದ ಕಾರಣ ನಾರಿಹಳ್ಳಕ್ಕೆ ಅಳವಡಿಸಿರುವ ಪಂಪ್‍ಸೆಟ್‍ಗಳು ಸ್ಥಗಿತಗೊಂಡಿವೆ. ಇನ್ನು ಹಳ್ಳ ಭಾಗದ ಬಹುತೇಕ ಕೊಳವೆಬಾವಿಗಳ ಅಂತರ್ಜಲಮಟ್ಟ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

‘ನಾರಿಹಳ್ಳಕ್ಕೆ ನೀರು ಹರಿಸಿದಲ್ಲಿ ಕನಿಷ್ಠ 20 ಗ್ರಾಮಗಳ ಜನಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ರೆಗ್ಯುಲೇಟರ್ ಕ್ಯಾಂಪ್ ಬಳಿಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ಎಸ್ಕೇಪ್ ಗೇಟ್‍ನಿಂದ ನಾರಿಹಳ್ಳಕ್ಕೆ ನೀರು ಬಿಡುಗಡೆ ಮಾಡುವ ಸಂಬಂಧ ಜಿಲ್ಲಾಡಳಿತ ತುರ್ತು ಗಮನಹರಿಸಬೇಕು’ ಎಂದು ರೈತ ಮುಖಂಡರಾದ ಕರಿಬಸವನಗೌಡ, ನೆಲ್ಲೂಡಿ ಶೇಖರಗೌಡ, ಎಲ್.ಮಹಾನಾಯ್ಡು, ಎಂ. ಕೇಶವರೆಡ್ಡಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT