ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಅನ್ಯಾಯವಾದರೆ ನೋಟಿಸ್‌: ಸಿ.ಟಿ ರವಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಕ್ಕರೆ ಸಚಿವ ಸಿ.ಟಿ. ರವಿ ಕಾರ್ಖಾನೆಗಳಿಗೆ ಎಚ್ಚರಿಕೆ
Last Updated 17 ನವೆಂಬರ್ 2019, 13:52 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಬ್ಬು ಕಟಾವು ಮತ್ತು ಸಾಗಣೆಗಾಗಿ (ಎಚ್‌ ಅಂಡ್‌ ಟಿ) ನಿಗದಿಗಿಂತ ಹೆಚ್ಚು ಹಣ ಪಡೆಯುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಲಾಗುವುದು’ ಎಂದು ಸಕ್ಕರೆ ಸಚಿವರೂ ಆದ ಸಿ.ಟಿ.ರವಿ ಅವರು ಹೇಳಿದರು.

ನಗರದಲ್ಲಿ ಶನಿವಾರ ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಬ್ಬು ಬೆಳೆಗಾರರ ಮನವಿಗೆ ಅವರು
ಪ್ರತಿಕ್ರಿಯಿಸಿದರು.

‘ಎಲ್ಲ ಕಾರ್ಖಾನೆಗಳು ₹ 700 ಕಡಿತ ಮಾಡಿಕೊಳ್ಳುತ್ತವೆ. ಆದರೆ, ಎನ್‌ಎಸ್‌ಎಲ್‌ನವರು ಮಾತ್ರ ₹ 850 ಕತ್ತರಿಸಿಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ಅಪಾರ ನಷ್ಟವಾಗುತ್ತಿದೆ’ ಎಂದು ಕೆಲ ರೈತರು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಖಾನೆಯ ಅಧಿಕಾರಿ, ‘ಎನ್‌ಎಸ್‌ಎಲ್‌ ಕಾರ್ಖಾನೆಗೆ ತರುವ ಕಬ್ಬು 100 ಕಿ.ಮೀ.ಗಿಂತ ಹೆಚ್ಚು ದೂರ ಇರುವುದರಿಂದ ಕಾರ್ಖಾನೆಯ ನಿಯಮಾನುಸಾರ ₹ 850 ಪಡೆಯಲಾಗುತ್ತಿದೆ’ ಎಂದು ಉತ್ತರಿಸಿದರು.

‘ಇದನ್ನು ಖುದ್ದು ಜಿಲ್ಲಾಧಿಕಾರಿ ಪರಿಶೀಲಿಸಿ ವರದಿ ನೀಡಬೇಕು. ನಿಯಮಾನುಸಾರ ಇಲ್ಲದಿದ್ದರೆ ನೋಟಿಸ್‌ ನೀಡಿ, ಹೆಚ್ಚುವರಿ ಹಣವನ್ನು ರೈತರಿಗೆ ಕೊಡಿಸಬೇಕು’ ಎಂದು ಸಚಿವರು ತಿಳಿಸಿದರು.

‘ಚಿಂಚೋಳಿ, ಜೇವರ್ಗಿ, ಅಫಜಲಪುರ ಹಾಗೂ ಸುತ್ತಲಿನ ತಾಲ್ಲೂಕುಗಳ ರೈತರಿಗೆ ಅನುಕೂಲವಾಗುವಂತೆ ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂಬ ಬೇಡಿಕೆ ಬಹುದಿನಗಳಿಂದ ಇದೆ. ಇದಕ್ಕೆ ಜಾಗವನ್ನೂ ಗುರುತಿಸಿ, ಮಂಜೂರಾತಿ ಪಡೆಯಲಾಗಿದೆ. ಬಾಕಿ ಉಳಿದ ಕೆಲಸಗಳನ್ನು ಮುಗಿಸಿ ಶೀಘ್ರ ಕಾರ್ಖಾನೆ ಸ್ಥಾಪನೆ ಮಾಡಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಸಚಿವರ ಗಮನಕ್ಕೆ
ತಂದರು.

ಕಬ್ಬಿಗೂ ಫಸಲ್‌ ಬಿಮಾ: ಕಬ್ಬನ್ನು ಕೂಡ ಕೇಂದ್ರ ಸರ್ಕಾರದ ‘ಫಸಲ್‌ ಬಿಮಾ’ ಯೋಜನೆಗೆ ಸೇರಿಸಬೇಕು ಎಂದು ಕೆಲವು ಜಿಲ್ಲೆಗಳಿಂದ ಬೇಡಿಕೆ ಬಂದಿದೆ. ಅದೇ ರೀತಿ ಕಲಬುರ್ಗಿ ಜಿಲ್ಲೆಯಲ್ಲೂ ಬೇಡಿಕೆ ಇದೆಯೇ ಇಲ್ಲವೇ ಎಂಬುದರ ಬಗ್ಗೆ ಜಿಲ್ಲಾಧಿಕಾರಿ ವರದಿ ನೀಡಬೇಕು. ಇದಕ್ಕೂ ಮುನ್ನ ರೈತರು, ಮುಖಂಡರನ್ನು ಕರೆದು ಚರ್ಚಿಸಬೇಕು. ಎಲ್ಲ ಕಡೆಯಿಂದ ಒಮ್ಮತದ ನಿರ್ಣಯ ಬಂದರೆ ನಾವು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದೂ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT