ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರಿಗೆ ಪೂರ್ಣ ವೇತನ: ಆದೇಶ

Last Updated 28 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಏಪ್ರಿಲ್‌ ತಿಂಗಳ ವೇತನವನ್ನು ಯಾವುದೇ ಕಡಿತ ಇಲ್ಲದೇ ಪಡೆಯಲಿದ್ದಾರೆ.

ಈ ಸಂಬಂಧ ಆರ್ಥಿಕ ಇಲಾಖೆ ಮಂಗಳವಾರ ಆದೇಶವನ್ನು ಹೊರಡಿಸಿದ್ದು, ಇದರಿಂದ ವೇತನ ಮತ್ತು ಪಿಂಚಣಿ ಕಡಿತವಾಗಬಹುದು ಎಂಬ ನೌಕರರ ಆತಂಕ ದೂರವಾಗಿದೆ.

ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ಕಾರ್ಯದರ್ಶಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದು, ಏಪ್ರಿಲ್‌ ತಿಂಗಳ ಸಂಬಳವನ್ನು ನೀಡಲು ವ್ಯವಸ್ಥೆ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

ವಿವಿಧ ಇಲಾಖೆಗಳಲ್ಲಿ ಸಂಬಳ ಮತ್ತು ಪಿಂಚಣಿಗಾಗಿ ನಿಗದಿ ಮಾಡಿ ಇಟ್ಟಿರುವ ಹಣವನ್ನು ಬಳಸಬೇಕು. ಅಲ್ಲದೆ ಖಜಾನೆಗಳಲ್ಲಿ ಯಾವುದೇ ತಿಂಗಳ ಸಂಬಳದ ಹಣವನ್ನು ಬಾಕಿ ಇಟ್ಟುಕೊಳ್ಳುವಂತಿಲ್ಲ. ಆಡಳಿತ ಇಲಾಖೆ ಮಾರ್ಚ್‌ ತಿಂಗಳ ಸಂಬಳ ಪಾವತಿ ಮಾಡಿಲ್ಲವಾದರೆ, ಆ ಹಣ ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಪೂರ್ಣ ಸಂಬಳ, ಪಿಂಚಣಿ ಪಾವತಿ ಮಾಡುವಂತೆ ಕಟ್ಟಪ್ಪಣೆ ಮಾಡಿದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT