ಗೋವಾದಲ್ಲಿ ಗಣೇಶ್‌: ಶೀಘ್ರ ಬಂಧನ

7

ಗೋವಾದಲ್ಲಿ ಗಣೇಶ್‌: ಶೀಘ್ರ ಬಂಧನ

Published:
Updated:
Prajavani

ಮಂಡ್ಯ: ‘ಶಾಸಕ ಗಣೇಶ್ ಬಂಧನಕ್ಕೆ ಬಲೆ ಬೀಸಿದ್ದು, ಶೀಘ್ರ ಬಂಧಿಸಲಾಗುವುದು. ಐಪಿಸಿ ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಇಲ್ಲಿ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಶಾಸಕ ಗಣೇಶ್ ಬಂಧನಕ್ಕೆ ರಾಜ್ಯದ ಪೊಲೀಸ್ ಪಡೆ ಬೆನ್ನು ಹತ್ತಿದೆ. ಮುಂಬೈನಲ್ಲಿ ಹಿಡಿಯಲು ಪ್ರಯತ್ನ ಮಾಡಲಾಗಿತ್ತು. ಆಗ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿ ಯಾರ ಕೈಗೂ ಸಿಗದೆ ಪರಾರಿಯಾಗಿದ್ದಾರೆ. ಗೋವಾದಲ್ಲಿ ಇರುವ ಮಾಹಿತಿ ಸಿಕ್ಕಿದ್ದು, ಶೀಘ್ರ ಬಂಧಿಸಲಿದ್ದಾರೆ. ಈ ಕುರಿತು ರಾಮನಗರ ತನಿಖಾಧಿಕಾರಿ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದೇನೆ' ಎಂದರು.

ಉಕ್ಕಿನ ಸೇತುವೆ: ಬೆಂಗಳೂರಿನಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ವಿವಿಧ ದೇಶಗಳ ಉಕ್ಕಿನ ಸೇತುವೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದು, ತಜ್ಞರಿಂದ ತಾಂತ್ರಿಕ ಸಲಹೆ ಮೇರೆಗೆ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !