ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತೆ ಗೌರಿ ಲಂಕೇಶ್‌ಗೆ ಮರಣೋತ್ತರ ಪ್ರಶಸ್ತಿ ಪ್ರದಾನ

ಹುತಾತ್ಮ ಪತ್ರಕರ್ತರ ಸ್ಮಾರಕದಲ್ಲಿ ಗೌರಿ ಹೆಸರು
Last Updated 12 ಅಕ್ಟೋಬರ್ 2018, 17:21 IST
ಅಕ್ಷರ ಗಾತ್ರ

ಬೆಂಗಳೂರು: ಫ್ರಾನ್ಸ್‌ನ ಬೇಯಾಕ್ಸ್‌–ಕಲ್ವಾಡೋಸ್‌ ಪ್ರಶಸ್ತಿಯನ್ನು ಮರಣೋತ್ತರವಾಗಿ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ನೀಡಲಾಯಿತು.

ಹುತಾತ್ಮ ಪತ್ರಕರ್ತರ ಸ್ಮಾರಕದಲ್ಲಿ ಗೌರಿ ಅವರ ಹೆಸರನ್ನೂ ಅನಾವರಣ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿತಾ ಲಂಕೇಶ್‌, ‘ಗೌರಿ ಅವರು ಸರ್ಕಾರ ಹಾಗೂ ವ್ಯವಸ್ಥೆಯ ನೈಜ ಮುಖವನ್ನು ಅನಾವರಣ ಮಾಡುತ್ತಿದ್ದರು. ಹಿಂದುತ್ವದ ಕಟು ಸತ್ಯಗಳನ್ನು ತಮ್ಮ ಬರಹಗಳ ಮೂಲಕ ಹೇಳುತ್ತಿದ್ದರು’ ಎಂದು ಹೇಳಿದರು.

‘ಗೌರಿ ಸಾವಿನ ಬಳಿಕ ದೇಶದಾದ್ಯಂತ ‘ನಾನು ಗೌರಿ’, ‘ನಾವೂ ಗೌರಿ’ ಎಂಬ ಆಂದೋಲನಗಳು ನಡೆದವು. ಇದಕ್ಕೆ ಲಕ್ಷಾಂತರ ಜನರು ಪ್ರತಿಕ್ರಿಯಿಸಿದರು. ಬಹುಭಾಷಾ ನಟ ಪ್ರಕಾಶ್‌ ರೈ ಕೂಡ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ಬೆಂಬಲಿಸಿದರು’ ಎಂದು ಕವಿತಾ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT