ಅಯ್ಯಪ್ಪನಿಂದ ಸಿ.ಎಂ: ಎಚ್‌ಡಿಕೆ

7

ಅಯ್ಯಪ್ಪನಿಂದ ಸಿ.ಎಂ: ಎಚ್‌ಡಿಕೆ

Published:
Updated:

ಕೊಚ್ಚಿ: ‘ನಾನು ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾಗಿದ್ದು, ಆತನ ಆಶೀರ್ವಾದದಿಂದಲೇ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಲಭಿಸಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ನ ಕೇರಳ ಘಟಕದಿಂದ ಇಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 2005ರಲ್ಲಿ ಶಬರಿಮಲೆಗೆ ಭೇಟಿ ನೀಡಿದ್ದೆ. ಮರುವರ್ಷವೇ ಮುಖ್ಯಮಂತ್ರಿ ಪಟ್ಟ ಸಿಕ್ಕಿತು. ಅದಕ್ಕೂ ಅಯ್ಯಪ್ಪನ ಆಶೀರ್ವಾದವೇ ಕಾರಣ ಎಂದು ನಂಬಿದ್ದೇನೆ ಎಂದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ, ಕೇರಳದ ಮುಖಂಡರು ಭಾಗವಹಿಸಿದ್ದರು.

***

ಪ್ರಾಯಶ್ಚಿತ್ತ ನಿವೇದನೆ ರದ್ದತಿಗೆ ವಿರೋಧ
ನವದೆಹಲಿ (ಪಿಟಿಐ):
ಚರ್ಚ್‌ಗಳಲ್ಲಿ ಪ್ರಾಯಶ್ಚಿತ್ತ ನಿವೇದನಾ ಪದ್ಧತಿ ರದ್ದುಪಡಿಸಬೇಕು ಎನ್ನುವ ರಾಷ್ಟ್ರೀಯ ಮಹಿಳಾ ಆಯೋಗದ ಶಿಫಾರಸಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (ಎನ್‌ಸಿಎಂ) ತೀವ್ರ ವಿರೋಧ ವ್ಯಕ್ತಪಡಿಸಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !