ಬುಧವಾರ, ಸೆಪ್ಟೆಂಬರ್ 29, 2021
19 °C
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಸಮಾಧಾನ

ವೀರಶೈವರನ್ನು ತುಳಿಯುತ್ತಿರುವ ಸರ್ಕಾರ: ಶಾಮನೂರು ಶಿವಶಂಕರಪ್ಪ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ‘ಎಲ್ಲಾ ಸರ್ಕಾರಗಳಿಂದಲೂ ವೀರಶೈವರನ್ನು ತುಳಿಯುವ ಕೆಲಸ ನಡೆಯುತ್ತಲೇ ಇದೆ. ಸರ್ಕಾರದಲ್ಲಿದ್ದರೂ ನಾವು ಇದನ್ನು ವಿರೋಧಿಸಲೇ ಬೇಕಾಗಿದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ಹರಿಹರ ತಾಲ್ಲೂಕಿನ ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಭಾನುವಾರ ನಡೆದ ಲಿಂಗೈಕ್ಯ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ 81ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

‘ಈ ಹಿಂದೆ ವೀರಶೈವ ಲಿಂಗಾಯತರು 2 ಕೋಟಿ ಜನರಿದ್ದರು. ರಾಜ್ಯದ ಜನಗಣತಿ ಪ್ರಕಾರ ಈಗ ವೀರಶೈವ ಲಿಂಗಾಯತರ ಸಂಖ್ಯೆ 83 ಲಕ್ಷಕ್ಕೆ ಬಂದಿದೆ. ಸರ್ಕಾರ ನಮ್ಮ ಸಮಾಜವನ್ನು ತುಳಿಯುತ್ತಿದೆ. ಕಾಂಗ್ರೆಸ್‌ನಲ್ಲಿದ್ದೇವೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರು ಮಾಡಿದ್ದೆಲ್ಲ ಸರಿ ಎಂದು ಹೇಳಬೇಕಾಗಿಲ್ಲ. ಅದೇ ರೀತಿ ಬಿಜೆಪಿಯವರೂ ತಮ್ಮ ಪಕ್ಷದವರು ತಪ್ಪು ಮಾತನಾಡಿದರೆ ಹೇಳಬೇಕಾಗುತ್ತದೆ. ಸಮಾಜದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಅದನ್ನು ವಿರೋಧಿಸುವ ವ್ಯವಸ್ಥೆ ರೂಢಿಸಿಕೊಳ್ಳಬೇಕು’ ಎಂದರು.

‘ಈ ಹಿಂದೆ ಸಿರಿಗೆರೆ ಮಠದ ಹಿಂದಿನ ಸ್ವಾಮೀಜಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿ 10ರಿಂದ 15 ವೀರಶೈವರನ್ನು ಗೆಲ್ಲಿಸುತ್ತಿದ್ದರು. ನಂತರ ಅವರು ಹೇಳಿದಂತೆ ಸರ್ಕಾರ ಕೇಳುವಂತೆ ಮಾಡುತ್ತಿದ್ದರು. ಈಗ ಈ ಪರಂಪರೆ ಹೊರಟುಹೋಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು