ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣ: ದರ್ಶನಕ್ಕೆ ಅಡ್ಡಿ ಇಲ್ಲ

ಕೊಲ್ಲೂರು, ಶ್ರೀಕೃಷ್ಣಮಠದಲ್ಲಿ ವಿಶೇಷ ಪೂಜೆ
Last Updated 15 ಜುಲೈ 2019, 15:30 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಉಡುಪಿಯ ಶ್ರೀಕೃಷ್ಣಮಠದಲ್ಲಿ ಚಂದ್ರಗ್ರಹಣ ದಿನವಾದ ಜುಲೈ 16ರಂದು ದೇವರ ದರ್ಶನದಲ್ಲಿ ವ್ಯತ್ಯಯ ಇರುವುದಿಲ್ಲ. ಅಂದು ವಿಶೇಷ ಪೂಜೆಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಕೊಲ್ಲೂರು ದೇವಸ್ಥಾನದಲ್ಲಿ ಮಂಗಳವಾರ ಎಂದಿನಿಂತೆ ಕಟ್ಟಕಟ್ಟಲೆ ಪೂಜೆಗಳು ನಡೆಯಲಿದ್ದು, ರಾತ್ರಿ ಗರ್ಭಗುಡಿ ಮುಚ್ಚಲಾಗುತ್ತದೆ. ಬಳಿಕ ಗ್ರಹಣ ಕಾಲದಲ್ಲಿ ಗರ್ಭಗುಡಿ ತೆರೆದು ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಈ ಸಂದರ್ಭ ದೇಗುಲದೊಳಗೆ ಭಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ದೇಗುಲದ ಅರ್ಚಕ ಗೋವಿಂದ ಅಡಿಗರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಕೊಲ್ಲೂರು ದೇವಸ್ಥಾನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಇರುತ್ತದೆ. ಗ್ರಹಣದ ದಿನ ಮಾತ್ರ ರಾತ್ರಿ ಅನ್ನ ಪ್ರಸಾದದ ಬದಲಾಗಿ ಫಲಾಹಾರ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಶ್ರೀಕೃಷ್ಣಮಠದಲ್ಲೂ ದೇವರ ದರ್ಶನದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಮಧ್ಯರಾತ್ರಿವರೆಗೂ ಗರ್ಭಗುಡಿಯ ಬಾಗಿಲು ತೆರೆದಿರುತ್ತದೆ. ಭಕ್ತರು ದರ್ಶನ ಪಡೆಯಬಹುದು ಎಂದು ಮಠದ ಪಿಆರ್‌ಒ ಶ್ರೀಶಭಟ್‌ ಕಡೆಕಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT