ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಶಂಸಿದ ಸಚಿವ ಜಿ.ಟಿ. ದೇವೇಗೌಡ

ಪ್ರಧಾನಿಗೆ ಹೊಗಳಿದಾಕ್ಷಣ ಬಿಜೆಪಿಗೆ ಸೇರುವೆನೆಂದರ್ಥವಲ್ಲ ಜಿ.ಟಿ ದೇವೇಗೌಡ
Last Updated 30 ಮೇ 2019, 4:58 IST
ಅಕ್ಷರ ಗಾತ್ರ

ಬೆಳಗಾವಿ:ದೇಶಸೇವೆಗಾಗಿ ಪ್ರಧಾನಿ ಮೋದಿ ತಮ್ಮನ್ನೇ ಸರ್ಮಪಿಸಿಕೊಂಡಿದ್ದಾರೆ. ಅವರ ಬದುಕು ಸರಳ. ತಮ್ಮ ತಾಯಿಗೆ ಗೌರವ ಕೊಡುವುದನ್ನು ನೋಡಿ ಜನ ಮಾರುಹೋಗಿದ್ದಾರೆ. ಅದಕ್ಕೇ ಪುನರಾಯ್ಕೆ ಮಾಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರಶಂಸಿಸಿದರು.

ನಗರದಲ್ಲಿ ಬುಧವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚಹಾ ಮಾರುತ್ತಿದ್ದ ಮೋದಿ ಈ ಹಂತಕ್ಕೆ ಕಷ್ಟಪಟ್ಟು ಬಂದಿದ್ದಾರೆ. ವಿದ್ಯಾರ್ಥಿಗಳು ಕೂಡ ಎಷ್ಟೇ ಕಷ್ಟ ಬಂದರೂ ಸಾಧನೆಯ ಮಾರ್ಗ ಬಿಡಬಾರದು. ವಿದ್ಯಾರ್ಥಿಗಳು ಮೋದಿಯವರಂತೆಯೇತಮ್ಮ ಹೆತ್ತವರನ್ನು ನಮಿಸಿದರೆ ಶಿಕ್ಷಣದೊಂದಿಗೆ ಸಂಸ್ಕಾರವೂ ಕಲಿತಂತೆ ಆಗುತ್ತದೆ’ ಎಂದು ಮುಕ್ತಕಂಠದಿಂದ ಹೊಗಳಿದರು.

3,800 ಉಪನ್ಯಾಸಕರ ನೇಮಕ: ‘ಸದ್ಯದಲ್ಲಿಯೇ 3,800 ಉಪನ್ಯಾಸಕರ ನೇಮಕಾತಿ ಮಾಡಲಾಗುವುದು. ಅತಿಥಿ ಉಪನ್ಯಾಸಕರಾಗಿ 10 ವರ್ಷಕ್ಕಿಂತ ಹೆಚ್ಚು ಸಮಯ ಕಾರ್ಯನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು’ ಎಂದು ಅವರು ಹೇಳಿದರು.

ಬಿಜೆಪಿ ಸೇರಲ್ಲ:ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಿ.ಟಿ. ದೇವೇಗೌಡ, ‘ಮೋದಿ ಅವರ ಕೆಲಸವನ್ನು ಕೊಂಡಾಡಿದ್ದೇನೆ. ಹಿಂದೆ ಸರ್ಜಿಕಲ್‌ ದಾಳಿ ನಡೆಸಿದ್ದಾಗಲೂ ಅವರನ್ನು ಹೊಗಳಿದ್ದೆ. ಇದರಲ್ಲಿ ತಪ್ಪೇನೂ ಇಲ್ಲ. ಅವರನ್ನು ಹೊಗಳಿದ್ದೇನೆ ಎಂದಾಕ್ಷಣ ನಾನು ಬಿಜೆಪಿ ಸೇರುತ್ತೇನೆ ಎಂದರ್ಥವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT