ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ

Last Updated 31 ಜನವರಿ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೆಚ್ಚಿಸಿದೆ.

ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಪ್ರತಿ ಉಪನ್ಯಾಸಕ್ಕೆ ಗೌರವ ಧನವನ್ನು ₹1500ಕ್ಕೆ ಹೆಚ್ಚಿಸಲಾಗಿದೆ. ಒಬ್ಬ ಉಪನ್ಯಾಸಕನಿಗೆ ಗರಿಷ್ಠ ತಿಂಗಳಿಗೆ ₹50,000ವರೆಗೆ ನೀಡಬಹುದು.

ಯಾವುದೇ ವಿಶ್ವವಿದ್ಯಾಲಯ ಮತ್ತು ಕಾಲೇಜಿನಲ್ಲಿ ಅನುಮೋದಿತ ಉಪನ್ಯಾಸಕರ ಹುದ್ದೆ ಖಾಲಿ ಇದ್ದಾಗ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬಹುದು. ಒಂದು ವೇಳೆ ವಿಶ್ವವಿದ್ಯಾಲಯಗಳಲ್ಲಿ ಅನುಮೋದಿತ ಉಪನ್ಯಾಸಕರ ಹುದ್ದೆಗಳು ಕಡಿಮೆ ಇದ್ದು, ಬೋಧನಾ ಕಾರ್ಯಭಾರ ಅಧಿಕವಾಗಿದ್ದರೆ, ಅಂತಹ ಸಂದರ್ಭದಲ್ಲಿ ಅನುಮೋದಿತ ಹುದ್ದೆಗಳಿಗಿಂತ ಶೇ 20ರಷ್ಟು ಅಥವಾ ಹೆಚ್ಚು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬಹುದು.

ಯುಜಿಸಿ ನಿಯಮಾವಳಿ ಪ್ರಕಾರ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಿಗೆ ಇರಬೇಕಾದ ಅರ್ಹತೆ ಅತಿಥಿ ಉಪನ್ಯಾಸಕರಿಗೂ ಇರಬೇಕಾಗುತ್ತದೆ. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಾಗ, ಸಹಾಯಕ ಪ್ರಾಧ್ಯಾಪಕರ ನೇಮಕ ಸಂದರ್ಭದಲ್ಲಿ ಅನುಸರಿಸುವ ಪ್ರಕ್ರಿಯೆಯನ್ನೇ ಪಾಲಿಸಬೇಕಾಗುತ್ತದೆ.

ಅತಿಥಿ ಉಪನ್ಯಾಸಕರನ್ನು ಕಾಯಂ ಉಪನ್ಯಾಸಕರಂತೆ ಪರಿಗಣಿಸುವುದಿಲ್ಲ. ನಿವೃತ್ತಿ ಹೊಂದಿದ ಉಪನ್ಯಾಸಕರನ್ನೂ ಅತಿಥಿ ಉಪನ್ಯಾಸಕರಾಗಿ ಮುಂದುವರಿಸಬಹುದು. ಆದರೆ, ಇದಕ್ಕೆ ಗರಿಷ್ಠ ವಯೋಮಿತಿ 70 ವರ್ಷಗಳು ಎಂದು ನಿಯಮ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT