ಗುರುವಾರ , ಆಗಸ್ಟ್ 5, 2021
21 °C

ಎಚ್. ವಿಶ್ವನಾಥ್‌ಗೂ ಸೂಕ್ತ ಸ್ಥಾನ: ಸಚಿವ ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸಮ್ಮಿಶ್ರ ಸರ್ಕಾರ‌ ಪತನಗೊಂಡು ಬಿಜೆಪಿ‌ ಸರ್ಕಾರ ರಚನೆಯಾಗಲು ಕಾರಣರಾದ ಎಚ್.ವಿಶ್ವನಾಥ್ ಅವರಿಗೂ ಸೂಕ್ತ ಸ್ಥಾನ ದೊರಕುತ್ತದೆ. ಆ ಬಗ್ಗೆ‌ ಮುಖ್ಯಮಂತ್ರಿ‌ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ‌ ಚರ್ಚಿಸಲಾಗಿದೆ. ಅವರೂ ಒಪ್ಪಿಕೊಂಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ಚನಾಥ್‌ ಅವರ ವಿಚಾರ‌ ಕುರಿತು ಮುಖ್ಯಮಂತ್ರಿಯೊಂದಿಗೇ ನಾನೇ ಎರಡು ಗಂಟೆ‌ಕಾಲ ಮಾತನಾಡಿರುವೆ ಎಂದರು.

ತಮಗೆ ವಿಧಾನ ಪರಿಷತ್‌ ಚುನಾವಣೆಯ

ಪರಿಷತ್ ಟಿಕೆಟ್ ತಪ್ಪಲು  ಸಿದ್ದರಾಮಯ್ಯ ಹಾಗೂ ಎಚ್. ಡಿ.ಕುಮಾರಸ್ವಾಮಿ ಕಾರಣ ಎಂಬ ವಿಶ್ವನಾಥ್ ಅವರ  ಹೇಳಿಕೆ ಸುಳ್ಳು.  ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ. ವಿಶ್ವನಾಥ್ ಅವರಿಗೆ ಸೂಕ್ತ ಸ್ಥಾನ ನೀಡುವ ಕುರಿತು ಕೋರ್ ಕಮಿಟಿಯಿಂದ ಯಾವ‌ ಅಡೆತಡೆಯೂ ಇಲ್ಲ. ವಿಶ್ವನಾಥ್ ಅವರೂ ಸಂತೋಷವಾಗಿಯೇ ಇದ್ದಾರೆ ಎಂದು ಹೇಳಿದರು. 

 'ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಮೊದಲು ರಾಜೀನಾಮೆ ಕೊಟ್ಟಿದ್ದು ಆನಂದ್ ಸಿಂಗ್. ಆಗ  ಎಲ್ಲರೂ ರಾಜೀನಾಮೆ ಕೊಡುತ್ತೇವೆ ಎನ್ನುತ್ತಿದ್ದರಷ್ಟೆ. ಆದರೆ ಯಾರೂ ಕೊಡಲಿಲ್ಲ, ಆನಂದ್ ಸಿಂಗ್ ಮೊದಲು ಕೊಟ್ಟರು- ನಂತರ ನಾವು ಕೊಟ್ಟೆವು ಎಂದು ಸ್ಮರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು